ಬೆಂಗಳೂರು: ಬಸ್ ಪ್ರಯಾಣ ದರಏರಿಕೆ ಕ್ರಮವನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಈ ಹಿಂದೆ ರಾಜ್ಯವನ್ನಾಳಿದ ಬಿಜೆಪಿಯವರಿಗೆ ಜನರ ಸಂಕಷ್ಟಗಳ ಬಗ್ಗೆ ಅರಿವಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಮಾರು 5900 ಕೋಟಿ ರೂಪಾಯಿ ಹೊರೆ ಹೊರಿಸಿ ಹೋಗಿದ್ದಾರೆ. ಅವರ ಕಾಲದಲ್ಲಿ ಗ್ಯಾಸ್ ಸಬ್ಸಿಡಿ ನಿಲ್ಲಿಸಿದರು ಎಂದು ದೂರಿದ ಅವರು, ಕಾಲಕಾಲಕ್ಕೆ ಸಮರ್ಪಕವಾಗಿ ಸಾರಿಗೆ ಸಂಸ್ಥೆಯನ್ನು ನಿರ್ವಹಣೆ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ ಬಸ್ಗಳ ಖರೀದಿ ವೇತನಪಾವತಿ ಸೇರಿದಂತೆ ಯಾವುದನ್ನು ಸಮರ್ಪಕವಾಗಿ ಮಾಡದೇ ಇದೀಗ ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದಿದ್ದಾರೆ.