ನವದೆಹಲಿ: ಭಾರತದ ಅತಿದೊಡ್ಡ ಕ್ರೀಡಾ ಮತ್ತು ಅಥ್ಲೀಸರ್ ಪಾದರಕ್ಷೆಗಳ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ಕ್ಯಾಂಪಸ್ ಮತ್ತು ವಿಕ್ರಾಂತ್ ಮಸ್ಸಿ ನಡುವಿನ ಸಹಯೋಗವು ಬ್ರಾಂಡ್ ಮತ್ತು ನಟ ಹೊಂದಿರುವ ವಿಶಿಷ್ಟವಾದ ಸ್ಟೈಲ್, ವೈವಿಧ್ಯಮಯತೆ ಮತ್ತು ಸ್ವ ಅಭಿವ್ಯಕ್ತಿಯಂತಹ ಗುಣಗಳನ್ನು ಪ್ರತಿಪಾದಿಸಲಿದೆ.ಕ್ಯಾಂಪಸ್ ಆಕ್ಟಿವ್ವೇರ್ ನ ಸಿಇಓ ನಿಖಿಲ್ ಅಗರ್ವಾಲ್ ಅವರು, ವಿಕ್ರಾಂತ್ ತನ್ನ ಬಹುಮುಖ ವ್ಯಕ್ತಿತ್ವದಿಂದ ಹೆಸರುವಾಸಿಯಾಗಿದ್ದಾರೆ.
ಇಂದು ಅವರು ಪ್ರತಿಭಾವ್ನಿತ ಯುವ ಕಲಾವಿದರು ಗೌರವಿಸುವ ವ್ಯಕ್ತಿಯಾಗಿ ಬೆಳೆದಿದ್ದಾರೆ, ಅದರಲ್ಲೂ ವಿಶೇಷವಾಗಿ ಯುವಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಸಹಯೋಗವು ವಿಕ್ರಾಂತ್ ಮಾಸ್ಸಿ ಪ್ರತಿದಿನ ಮಾಡುತ್ತಿರುವಂತೆ ನಮ್ಮ ಗ್ರಾಹಕರು ತಮ್ಮ ವ್ಯಕ್ತಿತ್ವದ ಕುರಿತು ಆತ್ಮವಿಶ್ವಾಸದಿಂದ ಹೊಂದಲು ಪ್ರೇರೇಪಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದರು.
ಕ್ಯಾಂಪಸ್ ಆಕ್ಟಿವ್ವೇರ್ ಜೊತೆಗೆ ಕೈಜೋಡಿಸಿರುವ ಕುರಿತು ಮಾತನಾಡಿರುವ ವಿಕ್ರಾಂತ್ ಮಾಸ್ಸೆ ಅವರು, ಪ್ರತಿಯೊಬ್ಬರ ಸ್ಟೈಲ್ ಅವರ ನಿಜ ವ್ಯಕ್ತಿತ್ವದ ಅನಾವರಣ ಎಂದೇ ನಾನು ನಂಬಿಕೊಂಡಿದ್ದೇನೆ. ಆರಾಮದಾಯಕತೆಗೆ ಆದ್ಯತೆ ನೀಡುತ್ತಲೇ ಪ್ರತ್ಯೇಕತೆಯನ್ನು ಸಂಭ್ರಮಿಸುವ ಬ್ರಾಂಡ್ ಅನ್ನು ಪ್ರತಿನಿಧಿಸಲು ನಾನು ಸಂತೋಷ ಹೊಂದಿದ್ದೇನೆ ಎಂದು ಹೇಳಿದರು.