ಬೆಂಗಳೂರಿನ ಜಯನಗರದ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ ಪ್ರತಿ ಗುರುವಾರದಂತೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಉತ್ಸವಗಳು, ಮತ್ತು ಸಹಸ್ರಾರು ಭಕ್ತಾದಿಗಳಿಗೆ “ಅನ್ನಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು,
ಸಂಜೆ ಭರತನಾಟ್ಯ ಕಾರ್ಯಕ್ರಮವನ್ನು ಕಲಾಯೋಗಿ ವಿದ್ವಾನ್ – ಎಸ್ ರಘುನಂದನ್ ಮತ್ತು ಅವರ ಶಿಷ್ಯವೃಂದದ ವಿದ್ಯಾರ್ಥಿಗಳು “ಭರತನಾಟ್ಯ”ಕಾರ್ಯಕ್ರಮ ವನ್ನು ವಿಶೇಷವಾಗಿ ನಡೆಸಿಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಲೇಖಕಿ ವೈ , ಕೆ ಸಂಧ್ಯಾ ಶರ್ಮ ರವರು ಮತ್ತು ವೀಣಾ ಕಲಾವಿದೆ ಗೀತಾ ಶ್ಯಾಂ ಪ್ರಕಾಶ್ ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಖ್ಯಾತ `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್’ ನ ಗುರು ರಘುನಂದನ್ ಮತ್ತು ಶಿಷ್ಯರು ಪುಷ್ಪಾಂಜಲಿಯಿಂದ ಪ್ರಾರಂಭಿಸಿ ಗಣೇಶ ಸ್ತುತಿ, ಜತಿಸ್ವರ, ನರ್ತನ ಗಣಪತಿ ಕೀರ್ತನೆ , ನವರಸ ರಾಮಾಯಣ, ಆನಂದ ತಾಂಡವ, ಪೋಗದಿರಲೋ ರಂಗ ದೇವರನಾಮ ಮತ್ತು ತಿಲ್ಲಾನದವರೆಗೂ ಬಹು ಸುಂದರ ಆಂಗಿಕಾಭಿನಯ- ಭಾವ-ಭಂಗಿಗಳಿಂದ ಮನಸೆಳೆದರು. ಸಮೂಹ ನೃತ್ಯದ ಸಾಮರಸ್ಯ- ರಮ್ಯ ನೃತ್ತಗಳ ನಿರೂಪಣೆ, ಚೆಂದದ ಅಭಿನಯ ನೃತ್ಯದ ಪರಿಣಾಮ ಹೆಚ್ಚಿಸಿತು. ಶ್ರೀ ರಘುನಂದನ್ ಸಾದರಪಡಿಸಿದ `ನವರಸ ರಾಮಾಯಣ’ನುರಿತ ನೃತ್ತ ಸೌಂದರ್ಯದಿಂದ ಮತ್ತು ಅಭಿನಯ ಪ್ರೌಢತೆಯಿಂದ ಗಮನ ಸೆಳೆಯಿತು.
ಪ್ರಾರಂಭದಲ್ಲಿ ಮಾಸ್ಟರ್. ರಿಷಿಕೇಶ್ ರಘುನಂದನ್ ಸುಶ್ರಾವ್ಯವಾಗಿ ಪ್ರಾರ್ಥನೆ ನಡೆಸಿದರು. ಕಾರ್ಯಕ್ರಮದಲ್ಲಿ ಭಾಗವಹಿ ಸಿದ ನೃತ್ಯ ಕಲಾವಿದೆಯರು ಅಶ್ವಿನಿ, ಸಿಂಧು, ಗುಣಶ್ರೀ, ದಿವ್ಯ, ಸೌದಾಮಿನಿ, ಅಮೂಲ್ಯ, ಮಂದಿರ, ಶ್ರೀ ರಕ್ಷಾ, ರಿಂಶ, ಅನನ್ಯ, ತುಳಸಿ, ಯಶಸ್ವಿ ಮತ್ತು ಸೇಜಲ್.