ಬೆಂಗಳೂರು: ಶೂದ್ರ ಶ್ರೀನಿವಾಸ್ ನೆಲದ ಮಾತು ಪ್ರತಿಷ್ಠಾನ( ರಿ) ಬೆಂಗಳೂರು.ಅಭಿಮಾನಿ ಬಳಗವು, ನಾಡಿನಾದ್ಯಂತ ಉದಯೋನ್ಮುಖ ಕವಿ ಹಾಗೂ ಕವಯತ್ರಿಯರನ್ನು ಪ್ರೋತ್ಸಾಹಿಸಬೇಕು ಹಾಗೂ ಅವರ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ,ಗೌರವಿಸಿ ಇಡೀ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿವರ್ಷವೂ ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾಬರುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಬಾರಿಯು 2024 ರ. ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಪ್ರಶಸ್ತಿಗಾಗಿ , ಕೃತಿಕಾರರು 2023 ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.ಈ.ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳು,ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ‘ಮಾನಸ ವಿದ್ಯಾಕೇಂದ್ರ’,ಅಣ್ಣಯ್ಯರೆಡ್ಡಿ ಬಡಾವಣೆ,ಜೆ ಪಿ ನಗರ ಆರನೇ ಹಂತ,ಬೆಂಗಳೂರು 560078 ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಮತಿ ಯಶವಂತ ಎಸ್ ಪ್ರೀತಿ ರೆಡ್ಡಿ,ಜೇನುಗೂಡು ಮಹೇಶ್ ಊಗಿನಹಳ್ಳಿ, .ಅನಿಲ್ ರೆಡ್ಡಿ,ಆನೇಕಲ್ ಬೈರಪ್ಪ ಪ್ರತಿಕಾ ಗೋಷ್ಠಿಯಲ್ಲಿ ಹಾಜರಿದ್ದರು.