ಬೆಂಗಳೂರು: ರಾಷ್ಟ್ರೀಯ ಅಹಿಂದ ಸಂಘಟನೆಯ ವತಿಯಿಂದ ಐತಿಹಾಸಿಕ ಸಂವಿಧಾನ ಪೀಠಿಕೆಯು ಜ್ಞಾಪಕ ಜನ ಜಾತ ಯಾತ್ರೆ 2024 ಕಾರ್ಯಕ್ರಮವನ್ನು ಆಯೋಜಿಸಿದೆ.ಅಹಿಂದ ನಾಯಕ ಸಿದ್ದರಾಮಯ್ಯನವರ ನಾಯಕತ್ವ ಉಳಿವಿಗಾಗಿ ಅಹಿಂದ ಜನರ ಜಾಗೃತಿಗಾಗಿ “ಸಂವಿಧಾನ ಪೀಠಿಕೆ ಜ್ಞಾಪಕ ಜನ ಜಾಥಾ” ಯಾತ್ರೆ ಹುಬ್ಬಳ್ಳಿಯಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದ್ದು, ಈ ಮಹಾ ಯಾತ್ರೆಯಲ್ಲಿ ಎಲ್ಲರೂ ಸೇರಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ ಕರೆ ಕೊಟ್ಟಿದ್ದಾರೆ.
ಈ ಜಾತಾಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಮಹಿಳಾ ಘಟಕದ ಪದಾಧಿಕಾರಿಗಳು ಯುವ ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ರಾಜ್ಯ ಘಟಕದ ಪದಾಧಿಕಾರಿಗಳು ರಾಜ್ಯ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಕಾರ್ಯಾಧ್ಯಕ್ಷರುಗಳು ಜಿಲ್ಲಾಧ್ಯಕ್ಷರುಗಳು ತಾಲೂಕ ಅಧ್ಯಕ್ಷರುಗಳು ಹಾಗೂ ಸಂಘಟನೆಯ ಎಲ್ಲ ಸದಸ್ಯರುಗಳು…
ಕಡ್ಡಾಯವಾಗಿ ಭಾಗವಹಿಸಬೇಕಾಗಿ ಕೋರಿಕೊಳ್ಳುತ್ತೇನೆ ಹಾಗೂ ನಮ್ಮ ರಾಜ್ಯದ ಅಹಿಂದ ನಾಯಕರಗಳು ವ್ಯಕ್ತಿ ಭೇದ, ಪಕ್ಷಬೇಧ, ಜಾತಿಭೇದ ಮರೆತು ಅಹಿಂದ ನಾಯಕರ ರಾಜಕೀಯ ಭವಿಷ್ಯದ ಅಸ್ತಿತ್ವಕ್ಕಾಗಿ, ಮಾನ್ಯ ಸಿದ್ದರಾಮಯ್ಯನವರ ನಾಯಕತ್ವದ ಉಳಿವಿಗಾಗಿ ಹಾಗೂ ಬೆಂಬಲಕ್ಕಾಗಿ ನಿಂತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ‘ರಾಜ್ಯಾಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ಅವರ ನೇತೃತ್ವದಲ್ಲಿ ನಡೆಯುವ ಐತಿಹಾಸಿಕ ಜಾತಾ ನಡೆಯುತ್ತಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಮನುವಾದಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದಿದ್ದಾರೆ.