ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಹತ್ತಿರವಿರುವಂತೆ ಸ್ಟೀಪಲ್ಚೇಸ್ ಓಟಗಾರ ಅವಿನಾಶ್ ಸಾಬ್ಳೆ ಸಕಾಲದಲ್ಲಿ ಪ್ರದರ್ಶನದ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದ್ದಾರೆ. ಭಾನುವಾರ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ನಲ್ಲಿ ಅವರು 3000 ಮೀ. ಸ್ಟೀಪಲ್ಚೇಸ್ ಓಟವನ್ನು 8 ನಿಮಿಷ 9.91 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಇನ್ನಷ್ಟು ಉತ್ತಮಪಡಿಸಿಕೊಂಡರು. ಅವರು ಆರನೇ ಸ್ಥಾನ ಪಡೆದರು.
29 ವರ್ಷದ ಸಾಬ್ಳೆ ಈ ಹಿಂದೆ 2022ರಲ್ಲಿ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ ಓಟ (8:11.20) ಓಡಿದ್ದರು. ಇಲ್ಲಿ ಒಂದೂವರೆ ಸೆಕೆಂಡು ಅಂತರದಿಂದ ಅದನ್ನು ಸುಧಾರಿಸಿದ್ದಾರೆ.
ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಇಥಿಯೋಪಿಯಾದ ಅಬ್ರಹಾಂ ಸಿಮೆ ಅವರೂ ತಮ್ಮ ವೈಯಕ್ತಿಕ ಶ್ರೇಷ್ಠ ಅವಧಿಯಲ್ಲಿ (8:02.36) ದೂರವನ್ನು ಕ್ರಮಿಸಿ ಕೂದಲೆಳೆ ಅಂತರದಲ್ಲಿ ಅಗ್ರಸ್ಥಾನ ಪಡೆದರು. ಕೆನ್ಯಾದ ಅಮೊಸ್ ಸೆರೆಮ್ (8:02.36) ಅವರು ಫೆÇಟೊಫಿನಿಷ್ನಲ್ಲಿ ಎರಡನೇ ಸ್ಥಾನ ಗಳಿಸಿದರು.