ಸ್ವದೇಶಿ ವಿಜ್ಞಾನ ಆಂದೋಲನ ಮತ್ತು ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಚಾಮರಾಪೇಟೆಯಲ್ಲಿರುವಕನ ಕನ್ನಡ ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ 15 ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ ನಡೆಯಿತು.
“ತಾಯ್ತನ ಹೆಚ್ಚಿಸುವುದು ಮತ್ತು ಮಹಿಳೆಯರಿಗೆ ವಿಜ್ಞಾನದಲ್ಲಿ ನಾಯಕತ್ವ ಸಕ್ರೀಯಗೊಳಿಸುವುದು” ಸಮ್ಮೇಳನದ ಮುಖ್ಯ ಧ್ಯೇಯ ಘೋಷವಾಗಿದೆ.
ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಚಿನ್ಮಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಶೈಕ್ಷಣಿಕ ನಿರ್ದೇಶಕಿ ಡಾ ಗೌರಿ ಭಾರತೀಯ ವಿಜ್ಞಾನ ಮಹಿಳೆಯಯ ಒಳಗೊಳ್ಳುವಿಕೆಯೊಂದಿಗೆ ಸಂಶೋಧೆನೆ ಮತ್ತು ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವುದು ಅಗತ್ಯವಿದೆ ಎಂದರು.
ಮಾತೃ ವೇದಿಕೆಯ ಅಧ್ಯಕ್ಷೆ ಡಾ ವೈ.ಎಸ್, ಗಾಯತ್ರಿ ಮಾತನಾಡಿ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಯ ಲಾಭ ಎಲ್ಲರಿಗೂ ತಲುಪಬೇಕು ಎಂದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಅಹಲ್ಯಾ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆರ್ಥಿಕ,ಸಾಮಾಜಿಕ ವಾಗಿ ಹಿಂದುಳಿದ ಹೆಣ್ಣುಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಒದಗಿಸುವುದು ಇಂದಿನ ಅಗತ್ಯವಾಗಿದೆ ಎಂದರು.