ದೊಡ್ಡಬಳ್ಳಾಪುರ: ನಗರದಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಈ ಕಾರ್ಯಕ್ರಮ ಕುರಿತು ಮಾತನಾಡಿದ ಶಾಸಕ ಧೀರಜ್ ಮುನಿರಾಜು ಅವರು ಕನಕದಾಸರು ಇಡೀ ವಿಶ್ವಕ್ಕೆ ತಮ್ಮ ಕೀರ್ತನೆಗಳ ಮೂಲಕ ದೇವರು ಕಾಣುವಂತೆ ಮಾಡಿದ್ದನ್ನ ಇಂದಿಗೂ ಸಾಕ್ಷಿಯಾಗಿದೆ, ಅವರ ಕೀರ್ತನೆಗಳು ಇಂದಿಗೂ ಜನಮಾನಸದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ನಂತರ ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ಕನಕದಾಸರು ಒಂದು ಸಮಾಜಕ್ಕೆ ಸಿಮೀತವಾಗಿಲ್ಲ. 500 ವರ್ಷಗಳ ಹಿಂದೆಯೇ ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿದವರು.ಇಂತಹ ಮಹನೀಯರ ನೆನೆಯುವುದು ನಮ್ಮ ಪುಣ್ಯ,ಇವರು ರಚಿಸಿದ ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಉಪದೇಶ ನೀಡಿ ಕನ್ನಡ ಹರಿದಾಸ ಪರಂಪರೆ ಪ್ರಮುಖರಾಗಿದ್ದಾರೆ ಎಂದು ಸ್ಮರಿಸಿದರು.
ಹಿರಿಯ ಸಾಧಕ ಮಾರಣ್ಣ, ವೆಂಕಟರಮಣಪ್ಪ, ಸಿದ್ದಲಿಂಗಯ್ಯ, ಸು.ನರಸಿಂಹಮೂರ್ತಿ ಅವರು ಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್, ಮುಖಂಡ ರಾದ ಚಂದ್ರಮೋಹನ್, ಶ್ರೀನಿವಾಸ, ಕಸಾಪ ನಿಕಟ ಪೂರ್ವ ಅದ್ಯಕ್ಷೆ ಪ್ರಮೀಳಾ ಮಹಾದೇವ್, ಪರಮೇಶ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.