ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ ಮಾಡಿರುವಂತಹ ಘಟನೆ ನಗರದ ಶೇಖ್ ರೋಜಾ ದರ್ಗಾದ ಆವರಣದಲ್ಲಿ ನಡೆದಿದೆ. ನಿನ್ನೆ ಶೇಖ್ ರೋಜಾದಲ್ಲಿ ಸಾಮೂಹಿಕ ವಿವಾಹ ವೇಳೆ ಧ್ವಜಾರೋಹಣ ಮಾಡಲಾಗಿದ್ದು, ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಗೆ ಕೆಲ ಮುಸ್ಲಿಂ ಮುಖಂಡರಿಂದಲೇ ದೂರು ನೀಡಲಾಗಿದೆ. ಇನ್ನು ರಾಷ್ಟ್ರ ಧ್ವಜ ಅಪಮಾನ ಮಾಡಿರುವುದನ್ನು ಹಿಂದು ಜಾಗೃತಿ ಸೇನೆ ಖಂಡಿಸಿದೆ. ಕ್ರಮಕ್ಕೆ ಆಗ್ರಹಿಸಲಾಗಿದೆ.