ಬೆಂಗಳೂರು: ಮಕ್ಕಳ ಮೇಲೆ ಗುಣಾತ್ಮಕ ಪ್ರಭಾವ ಬೀರುವ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಲು ಆದ್ಯತೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ರಾಷ್ಟç ಪ್ರಶಸ್ತಿ ಪುರಸ್ಕöÈತ ನಿರ್ದೇಶಕರುಗಳಾ ಪಿ.ಶೇಷಾದ್ರಿ, ಬಿ.ಎಸ್.ಲಿಂಗದೇವರು, ಗೋಪಾಲಕೃಷ್ಣ ಪೈ ಹಾಗೂ ಚಿತ್ರ ವಿಮರ್ಶಕ ಸುಬ್ರಹ್ಮಣ್ಯ ಅವರನ್ನೊಳಗೊಂಡ ನಿಯೋಗ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈಗಿನ ಸಾಮಾಜಿಕ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದರು. ಸಮಾಜದ ಅನೇಕ ಅನಿಷ್ಠಗಳು ಮತ್ತು ಮೂಢ ನಂಬಿಕೆಗಳ ವಿರುದ್ದ ಕಿರು ಚಿತ್ರಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಸಣ್ಣ ಸಣ್ಣ ಘಟನೆಗಳು ಕೂಡ ಬಹಳ ಮುಖ್ಯವಾಗುತ್ತವೆ. ಆದ್ದರಿಂದ ಈ ಬಗ್ಗೆ ಚಿತ್ರರಂಗ ಗಮನಹರಿಸಬೇಕು ಎಂದು ಅಭಿಪ್ರಾಯಿಸಿದರು.
ಸೋಶಿಯಲ್ ಮೀಡಿಯಾ ವೇದಿಕೆಯನ್ನು ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂಥಹ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಕಡಿಮೆ ಬಜೆಟ್ನಲ್ಲಿ ಮಾಡಲು ಮುಂದಾಗುವುದಾದರೆ ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಸಹಕಾರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿತ್ತು. ಶಾಲಾ ಶಿಕ್ಷಣ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಿಂದಾಗಿ ಸಾಕಷ್ಟು ಬದಲಾವಣೆಯನ್ನು ತರಲು ಸಾಧ್ಯವಾಗಿತ್ತು ಎಂದು ಹೇಳಿದರು.
ಈಗಿನ ಕಾಲಘಟ್ಟದ ಯುವ ಜನರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನಾಡಿನ ಸಂಸ್ಕöÈತಿಯ ನೆಲೆಯಲ್ಲಿ ಚಿಂತನೆಗೊಳಗಾಗುವ ಮತ್ತು ವಿದ್ಯಾರ್ಥಿ ಸಮೂಹದ ಮೇಲೆ ಪ್ರಭಾವ ಬೀರುವಂತೆ ಕಿರು ಚಿತ್ರ ಮತ್ತು ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿ ಎಂದು ನಿರ್ದೇಶಕರುಗಳಿಗೆ ಶಾಲಿನಿ ರಜನೀಶ್ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪಿ.ಶೇಷಾದ್ರಿ ಅವರ ಸಿನಿಮಾ ಮಂಥನ ಕಾರ್ಯಕ್ರಮವನ್ನು ಸುಚಿತ್ರ ಫಿಲಂ ಸೊಸೈಟಿ ಸಹಯೋಗದಲ್ಲಿ ನ.೨೧ರಿಂದ ೨೪ ತನಕ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಆಹ್ವಾನ ಮಾಡಲಾಯಿತು. ಸುಚಿತ್ರ ಫಿಲಂ ಸೊಸೈಟಿಯಲ್ಲಿ ಶೇಷಾದ್ರಿ ಅವರ ನಿರ್ದೇಶನದ ಚಿತ್ರಗಳನ್ನು ಪ್ರದರ್ಶನ ಮತ್ತು ಅವುಗಳ ಬಗ್ಗೆ ಸಂವಾದ ಹಾಗೂ ಅವರ ಕುರಿತಾದ ಪುಸ್ತಕಗಳನ್ನು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಸ್.ಲಿಂಗದೇವರು ತಿಳಿಸಿದರು.
ಎಂಟು ರಾಷ್ಟçಪ್ರಶಸ್ತಿಗಳನ್ನು ಪಡೆದಿರುವ ಶೇಷಾದ್ರಿ ಅವರ ಹೆಸರಿನಲ್ಲಿ ಸಿನಿಮೋತ್ಸವ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಆಕಾಶವಾಣಿಯ ಡಾ.ನಿರ್ಮಲ ಎಲಿಗಾರ್ ಹಾಜರಿದ್ದರು.