ಮುಂಬೈ: ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ನ್ನು ಟೀಕಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ವಿರುದ್ಧ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭಾರತದ ಬ್ಯಾಟರ್ ಕೇವಲ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ್ದು, ಕೊಹ್ಲಿಯ ಫಾರ್ಮ್ ಕಳವಳಕಾರಿಯಾಗಿದೆ ಫಾರ್ಮ್ ಗೆ ಮರಳಲು ಕೊಯ್ಲಿ ಅವರಿಗೆ ಇನ್ನೂ ಸಾಮರ್ಥ್ಯವಿದೆ. ಅದನ್ನು ಮಾಡಲು ಆಸ್ಟ್ರೇಲಿಯಾಕ್ಕಿಂತ ಉತ್ತಮವಾದ ಸ್ಥಳವಿಲ್ಲ ಎಂದು ಪಾಂಟಿಂಗ್ ಇತ್ತೀಚೆಗೆ ಹೇಳಿದ್ದರು.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಗೌತಮ್ ಗಂಭೀರ್, ಪಾಂಟಿಂಗ್ಗೂ ಭಾರತೀಯ ಕ್ರಿಕೆಟ್ಗೂ ಏನು ಸಂಬಂಧ? ಅವರು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಮೊದಲು ಯೋಚಿಸಬೇಕು ಎಂದು ಭಾವಿಸುತ್ತೇನೆ. ಅದಕ್ಕಿಂತ ಮುಖ್ಯವಾಗಿ, ವಿರಾಟ್ ಮತ್ತು ರೋಹಿತ್ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲ ಎಂದರು.