ವಿಜಯಪುರ: ಹೊಂಡಾ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ(itSI) ತನ್ನ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನವನ್ನು ವಿಜಯಪುರಕ್ಕೆ ತಂದು, ಸೆಂಟ್ ಜೋಸೆಫ್ ಶಾಲೆ ಹಾಗೂ ಚಿನ್ಮಯಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಿತು. ೨೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ, ಈ ಕಾರ್ಯ ಕ್ರಮವು ಹೊಣೆಗಾರಿಕೆಯಿಂದ ರಸ್ತೆ ಬಳಸುವ ಸಂಸ್ಕöÈತಿಯನ್ನು ಬಲಪಡಿಸುವುದೇ ಉದ್ದೇಶವಾಗಿತ್ತು.
ಈ ಕಾರ್ಯಕ್ರಮವು ಭವಿಷ್ಯದ ವಾಹನ ಸವಾರರು ಮತ್ತು ನಾಗರಿಕರನ್ನು ರೂಪಿಸುವಲ್ಲಿ ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿತು. ವಿದ್ಯಾರ್ಥಿ
ಗಳಿಗೆ ಸರಿಯಾದ ಹೆಲ್ಮೆಟ್ ಧರಿಸುವಿಕೆ, ಟ್ರಾಫಿಕ್ ಸಂಕೇತ ಪಾಲನೆ, ಪಾದಚಾರಿಗಳ ನಿಯಮಗಳು ಮತ್ತು ನೈಜ ಪರಿಸ್ಥಿತಿಗಳಲ್ಲಿ ಅಪಾಯವನ್ನು ಊಹಿಸುವ ಸಾಮರ್ಥ್ಯ ಸೇರಿದಂತೆ ರಸ್ತೆ ಸುರಕ್ಷತೆಯ ಪ್ರಾಯೋಗಿಕ ಅಂಶಗಳನ್ನು ಪರಿಚಯಿಸಲಾಯಿತು. ಊಒSI, ರಸ್ತೆ ಸುರಕ್ಷತೆಯನ್ನು ಕೇವಲ ನಿಯಮವಲ್ಲ, ಬದುಕಿನ ಅಭ್ಯಾಸವೆಂದು ಪಾಲ್ಗೊಂಡವರಲ್ಲಿ ಅರಿವು ಮೂಡಿಸಿತು.