ದೇವನಹಳ್ಳಿ: ಆರ್ಆರ್ಎಸ್ಎಲ್ ಜಕ್ಕೂರಿನಲ್ಲಿ 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳನ್ನು ನಿರ್ಮಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಆಹಾರ ಸಚಿವ ಕೆಹೆಚ್ .ಮುನಿಯಪ್ಪ.ಭಾರತ ಸರ್ಕಾರವು “ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನಶಾಸ್ತ್ರದ ಮೂಲಸೌಕರ್ಯವನ್ನು ಬಲಪಡಿಸುವುದು” ಎಂಬ ಯೋಜನೆಯಡಿಯಲ್ಲಿ 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳನ್ನು ನಿರ್ಮಿಸಲು ರೂ.400.00 ಲಕ್ಷಗಳನ್ನು ಮಂಜೂರು ಮಾಡಿದೆ.
ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ, ಬೆಂಗಳೂರು, ಅವರು 2016 ರಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಹಣವನ್ನು ಠೇವಣಿ ಮಾಡಿದ್ದು ಕರ್ನಾಟಕ ಸರ್ಕಾರವು “ಆಹಾರ ಭವನ” ನಿರ್ಮಿಸಲು ಆವರಣವನ್ನು ಬಳಸಿಕೊಳ್ಳಲು ನಿರ್ಧರಿಸಿತ್ತು ಮತ್ತು ಬೆಂಗಳೂರಿನ ಜಕ್ಕೂರಿನಲ್ಲಿ 8 ಎಕರೆ ಭೂಮಿಯನ್ನು ಕಾನೂನು ಮಾಪನಶಾಸ್ತ್ರ ಇಲಾಖೆಗೆ ಮಂಜೂರು ಮಾಡಿತ್ತು.
ಪ್ರಸ್ತುತ, ಒಂದು ಎಕರೆ ಪ್ರದೇಶವನ್ನು ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿ (ಖಖSಐ) ಗಾಗಿ ಬಳಸಲಾಗಿದೆ ಮತ್ತು ಒಂದು ಎಕರೆ ಖಾಲಿ ಉಳಿದಿದೆ. 46ವರ್ಷಗಳ ನಂತರ ಕಾನೂನು ಮಾಪನಶಾಸ್ತ್ರ ಇಲಾಖೆಯಪುನರ್ ರಚನೆಯನ್ನು ಗಮನಿಸಿದರೆ, ಕಾರ್ಯಾಚರಣೆ ಗಳನ್ನು ಬಲಪಡಿಸಲು 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳ ಸ್ಥಾಪನೆಯು ಅತ್ಯಗತ್ಯವಾಗಿದೆ.
22-08-2024 ರಂದು ರಾಷ್ಟ್ರೀಯ ಪರೀಕ್ಷಾ ಭವನಕ್ಕೆ ಅಡಿಗಲ್ಲು ಹಾಕಲಾಗಿದ್ದು, ಆರ್ಆರ್ಎಸ್ಎಲ್ ಜಕ್ಕೂರಿನಲ್ಲಿ ಉಳಿದ ಒಂದು ಎಕರೆ ಪ್ರದೇಶವು ಈ ಉದ್ದೇಶಕ್ಕೆಸೂಕ್ತವಾಗಿದೆ.ಆದ್ದರಿಂದ, ಈ ಪ್ರಯೋಗಾಲಯಗಳ ನಿರ್ಮಾಣ ಮತ್ತು ಸ್ಥಾಪನೆಗೆ ಶೀಘ್ರವಾಗಿ ತಮ್ಮ ಅನುಮೋದನೆಯನ್ನು ನೀಡಬೇಕು ಎಂದು ಕೇಂದ್ರ ಸಚಿವರಿಗೆ ಪತ್ರ ಸಲ್ಲಿಸುವ ಮೂಲಕ ವಿನಂತಿಸಿದರು.