ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ದ್ವಿತೀಯ ದರ್ಜೆ ಸಹಾಯಕ ರುದ್ರೇಶ್ ಪ್ರಕರಣ ಸಂಬAಧ ಮೂವರು ವಿರುದ್ಧ ದೂರು ದಾಖಲಿಸಿ ರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಡ ಮಾರ್ಟಿನ್ ತಿಳಿಸಿದ್ದಾರೆ.
ಪ್ರಕರಣ ಸಂಬAಧ ತಹಶೀಲ್ದಾರ್ ಬಸವರಾಜ್ ನಾಗರಾಳ, ಅಶೋಕ್ ಹಾಗೂ ಸೋಮು ವಿರುದ್ಧ ದೂರು ದಾಖಲು ಮಾಡಲಾಗಿದೆ. ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತಿದೆ. ಮೃತ ರುದ್ರೇಶ್ ಅವರು ಕಚೇ-ರಿಯ ವ್ಯಾಟ್ಸ್ ಅಪ್ಗೆ ಡೆತ್ನೋಟ್ ಕಳಿಸಿದ್ದಾರೆ.
ರುದ್ರೇಶ್ ಅವರ ಮೊಬೈಲ್ನಿಂದ ಈ ಸಂದೇಶವು ಬಂದಿದ್ದು, ಅದನ್ನು ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲು ಮೊಬೈಲ್ ನೀಡುವಂತೆ ಅವರ ಕುಟುಂಬದವರ್ಗವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಪ್ರಕರಣ ಸಂಬAಧದಲ್ಲಿ ಆರೋಪಿಗಳೆನ್ನಲಾದವರು ತಲೆ ಮರೆಸಿಕೊಂಡಿದ್ದು, ಅವರಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.