ಮೊಹಮ್ಮದ್ ನಬಿ ಅವರ ಆಲ್ರೌಂಡ್ ಆಟದ ಹೊರತಾಗಿಯೂ ಶ್ರೀಲಂಕಾ ವಿರುದ್ಧ ೬ ವಿಕೆಟ್ ಗಳ ಪರಾಭವ ಅನುಭವಿಸಿದ ಅಫ್ಘಾನಿಸ್ತಾನ ತಂಡ ಏಷ್ಯಾ ಕಪ್ ೨೦೨೫ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾ ತಂಡದ ಗೆಲುವಿನಿಂದಾಗಿ ಬಾAಗ್ಲಾದೇಶ ತಂಡ ಸಹ ಇದೀಗ ಸೂಪರ್ ೪ ಹಂತಕ್ಕೆ ತೇರ್ಗಡೆಗೊಂಡಿದೆ. ಹೀಗಾಗಿ ಏಷ್ಯಾಕಪ್ ನ ಸೂಪರ್ ೪ ಹಂತದ ೪ ತಂಡಗಳು ಇದೀಗ ಅಂತಿಮಗೊAಡಿದೆ. ಎ ಬಣದಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರವೇಶಿಸಿದ್ದರೆ, ಬಿ ಬಣದಿಂದ ಶ್ರೀಲಂಕಾ ಮತ್ತು ಬಾಂಗ್ಲೇದೇಶ ತAಡಗಳು ಪ್ರವೇಶಿಸಿವೆ.
ಅಬುಧಾಬಿಯಲ್ಲಿ ಗುರುವಾರ ನಡೆದ ಬಿ ಬಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ತಂಡ ನಿಗದಿತ ೨೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೬೯ ರನ್ ಕಲೆ ಹಾಕಿತು. ಇದನ್ನು ಇನ್ನೂ ೯ ಎಸೆತಗಳು ಬಾಕಿ ಉಳಿದಿರುವಂತೆ ಶ್ರೀಲAಕಾ ತಂಡ ಗುರಿ ತಲುಪಿ ಜಯ ಗಳಿಸಿತು. ಆರಂಭಿಕನಾಗಿ ಕ್ರೀಸಿಗೆ ಆಗಮಿಸಿ ತಂಡವನ್ನು ವಿಜಯದ ದಡ ಸೇರಿಸಿದ ಕುಸಾಲ್ ಮೆಂಡಿಸ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶ್ರೀಲಂಕಾ ತಂಡ ಆರಂಭದಲ್ಲಿ ವೇಗವಾಗಿ ರನ್ ಗಳಿಸಿದರೂ ೬ನೇ ಓವರ್ ನಲ್ಲಿ ೪೭ ರನ್ ಗೆ ೨ ವಿಕೆಟ್ ಗಳು ಬಿದ್ದಾಗ ಶ್ರೀಲಂಕಾ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿತ್ತು. ಈ ಹಂತದಲ್ಲಿ ಕುಸಾಲ್ ಪಿರೇರಾ(೨೦ ಎಸೆತದಲ್ಲಿ ೨೮) ಅವರ ಜೊತೆ ಸೇರಿದ ಆರಂಭಿಕ ಕುಸಾಲ್ ಮೆಂಡಿಸ್ ಮೂರನೇ ವಿಕೆಟ್ ಗೆ ೪೫ ರನ್ ಗಳ ಜೊತೆಯಾಟವಾಡಿದರು. ಬಳಿಕ ನಾಯಕ ಚರಿತ ಅಸಲಂಕಾ(೧೨ ಎಸತೆದಿಂದ ೧೭) ಸಹ ವೇಗವಾಗಿ ರನ್ ಗಳಿಸುವ ಮೂಲಕ ಕುಸಾಲ್ ಮೆಂಡಿಸ್ ಗೆ ಸಾಥ್ ನೀಡಿದರು.
ತಂಡದ ಮೊತ್ತ ೧೫ನೇ ಓವರ್ ನಲ್ಲಿ ೧೧೯ ಆಗಿರುವಾಗ ಚರಿತ ಅಸಲಂಕಾ ಅವರು ರಶೀದ್ ಖಾನ್ ಅವರು ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು. ಇಲ್ಲಿಂದ ಬಳಿಕ ಬಾಕಿ ಉಳಿದ ಕೆಲಸವನ್ನು ಕುಸಾಲ್ ಮೆಂಡಿಸ್(೫೧ ಎಸೆತದಲ್ಲಿ ೭೦) ಮತ್ತು ಕಮಿಂಡು ಮೆಂಡಿಸ್(೧೩ ಎಸೆತದಲ್ಲಿ ೨೬) ಅವರೇ ಮುಗಿಸಿದರು. ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಅಚ್ಚರಿಯ ಫಲಿತಾಂಶ ನೀಡಬಲ್ಲರು ಎಂದೇ ಕ್ರಿಕಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ರಶೀದ್ ಖಾನ್ ಬಳಗ ಗುಂಪು ಹಂತದಲ್ಲೆ ತನ್ನ ಅಭಿಯಾನ ಮುಗಿಸಿದೆ.
ಆದರೆ ಅಂತಿಮ ಹಂತದಲ್ಲಿ ಮೊಹಮ್ಮದ್ ನಬಿ ಅವರು ಬಹಳ ಆಕ್ರಮಣಕಾರಿಯಾಗಿ ಆಡಿದರು. ಕೇವಲ ೨೨ ಎಸೆತಗಳಲ್ಲಿ ೬೦ ರನ್ ಗಳಿಸಿದರು. ಅದರಲ್ಲಿ ೩ ಬೌಂಡರಿ ಮತ್ತು ೬ ಭರ್ಜರಿ ಸಿಕ್ಸರ್ ಗಳಿದ್ದವು. ಧುನಿತ್ ವೆಲ್ಲಲಗೆ ಅವರು ಎಸೆದ ಕೊನೆಯ ಓವರ್ ನಲ್ಲಿ ಅವರು ನಿರಂತರ ೫ ಸಿಕ್ಸರ್ ಸೇರಿದಂತೆ ಒಟ್ಟು ೩೨ ರನ್ ಗಳನ್ನು ಬಾಚಿದರು. ಕೇವಲ ೨೦ ಎಸೆತಗಳಲ್ಲಿ ೫೦ ರನ್ ಬಾರಿಸಿದ ಅವರು ಅಫ್ಘಾನಿಸ್ತಾನದ ಪರ ಅತಿ ವೇಗದ ಅರ್ಧಶತಕ ಬಾರಿಸಿದ ಗೌರವಕ್ಕೆ ಪಾತ್ರರಾದರು. ಶ್ರೀಲಂಕಾ ಪರ ವೇಗಿ ನುವಾನ್ ತುಷಾರ ಅವರು ೧೮ ರನ್ ಗೆ ೪ ವಿಕೆಟ್ ಎಗರಿಸಿದರು.