ಚಿಕ್ಕಬಳ್ಳಾಪುರ: ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಬಳಿ ಇರುವ ಬಡಾವಣೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ನೂತನವಾಗಿ ರೆಡ್ ಕ್ರಾಸ್ ಭವನ, ರಕ್ತ ನಿಧಿ ಕೇಂದ್ರ ವನ್ನು ಸುಸಜ್ಜಿತವಾಗಿ ನಿರ್ಮಿಸಲು ಉದ್ದೇಶಿಸಿದ್ದು ಸ್ಥಳಕ್ಕೆ ನಗರಸಭೆ ಅಧ್ಯಕ್ಷರಾದ ಶ್ರೀ ಗಜೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದು ನಿವೇಶನದಲ್ಲಿ 15 ದಿನದ ಒಳಗಡೆ ಕೊಳವೆ ಬಾವಿ ಕೊರಿಸಿಕೊಡಲಾಗುವುದೆಂದು ತಿಳಿಸಿದರು.
ಅಲ್ಲದೆ ನಿವೇಶನದ ಬಳಿ 3 ಟ್ರಾನ್ಸ್ಫಾರ್ಮರ್ ಇದ್ದು ಇದನ್ನು ಬದಲಾಯಿಸುವಂತೆ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದರು ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಕೋಡಿ ರಂಗಪ್ಪ, ಜಿಲ್ಲಾ ಖಜಾಂಚಿ ಎಂ ಜಯರಾಮ್ ಭಾಗವಹಿಸಿದ್ದರು.