ಕನಕಪುರ: ನಗರದ ಎ. ವಿ. ಆರ್. ರಸ್ತೆ ಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ 23 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಚಂಡಿಕಾ ಹೋಮ ಅದ್ದೂರಿಯಾಗಿ ಜರುಗಿತು.
ಆಗಮ ಪುರೋಹಿತರಾದ ಸೂರ್ಯ ನಾರಾಯಣ ಶಾಸ್ತ್ರೀಗಳ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 7.00 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಆರಂಭವಾಗಿ ಗಣಪತಿ ಹೋಮ, ನವಗ್ರಹ ಹೋಮ, ಮಹಾ ಮೃತ್ಯುಂಜಯ ಹೋಮ, ಲಕ್ಷ್ಮೀ ಹೋಮ, ಚಂಡಿಕಾ ಹೋಮ ಗಳನ್ನು ನೇರವೇರಿಸಿ.
ಮಧ್ಯಾಹ್ನ 1.00 ಗಂಟೆ ವೇಳೆಗೆ ಪೂರ್ಣಾಹುತಿ ನೇರವೇರಿಸಲಾಯಿತು.ಪೂರ್ಣಾಹುತಿಯ ನಂತರ ಶ್ರೀ ದೇವಿಗೆ ಮಂಗಳಾರತಿ ನೇರವೇರಿಸಿ ಬಂದಂತಹ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸಂಜೆ 6 ಗಂಟೆಗೆಯ ನಂತರ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.