ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ನಂತರ ಬೆಚ್ಚಿಬಿದ್ದಿದ್ದ ಪ್ರಮುಖ ಸಾಕ್ಷಿದಾರ ಭಯಭೀತನಾಗಿ ಜೂನ್ 11 ರಂದು ಹುಟ್ಟೂರು ಸೇರಿದ್ದ.ಜೂನ್ 11 ರ ಸಂಜೆ ಹಾಸನದ ಹುಟ್ಟೂರಿಗೆ ತೆರಳಿ ಸ್ನೇಹಿತನ ಬಳಿ ಹತ್ಯೆ ವಿಚಾರ ತಿಳಿಸಿದ್ದ…! ಹತ್ಯೆಯಲ್ಲಿ ನೀನು ಭಾಗಿಯಾಗಿದ್ಯಾ ಎಂದು ಸ್ನೇಹಿತರು ಆತನನ್ನು ಪ್ರಶ್ನೇ ಮಾಡಿದ್ದಾರೆ, ಇದಕ್ಕೆ ಉತ್ತರಿಸಿದ ಪ್ರಮುಖ ಸಾಕ್ಷಿ, ನಾನೇನು ಮಾಡಿಲ್ಲ ಆದರೆ ನಾನು ಘಟನೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾನೆ.
ತದನಂತರ ಜೂನ್ 11 ಹಾಗೂ ಜೂನ್ 12 ರಂದು ಭಯಭೀತನಾಗಿ ಮನೆಯಿಂದ ಹೊರಬಂದಿರಲಿಲ್ಲ. ಸಾಕ್ಷಿ ಜೂನ್ 13 ರಂದು ಸ್ನೇಹಿತರ ಜೊತೆ ಗೋವಾ ಗೆ ಟ್ರಿಪ್ ಗೆ ತೆರಳಿದ್ದ. ಗೋವಾಗೆ ತೆರಳಿದ್ದ ವೇಳೆ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಹತ್ಯೆಯಾಗಿದ್ದು,ಪವಿತ್ರಗೌಡ ದರ್ಶನ್ ಬಂಧನವಾಗಿದ್ದ ವಿಚಾರ ಮಾಧ್ಯಮಗಳಿಂದ ತಿಳಿದಿತ್ತು. ಈ ವೇಳೆ ತಾನೇನು ಮಾಡಿಲ್ಲ ಘಟನೆಯನ್ನು ನೋಡಿದ್ದೇನಷ್ಟೆ ಎಂದು ಸ್ನೇಹಿತರಿಗೆ ತಿಳಿಸಿದ್ದನು.
ಜೂನ್ 13 ರಿಂದ 16 ರವರೆಗೂ ಗೋವಾ ಟ್ರಿಪ್ ಮುಗಿಸಿ ವಾಪಸ್ ಬಂದಿದ್ದ ಪ್ರಮುಖ ಸಾಕ್ಷಿ. ಜೂನ್ 16 ರಂದು ಬೆಂಗಳೂರಿಗೆ ವಾಪಸ್ ಆಗಿ
ಜೂನ್ 16 ರಿಂದ ಬೆಂಗಳೂರು ತಿರುಪತಿ ಕೋಲಾರ ಗೋವಾ ಹುಬ್ಬಳ್ಳಿಯಲ್ಲಿ ಭಯಭೀತನಾಗಿ ವಾಸ್ತವ್ಯ ಹೂಡಿದ್ದ. ಇಷ್ಟೊತ್ತಿಗೆ ಪಟ್ಟಣಗೆರೆ ಶೆಡ್ ನಲ್ಲಿ ಕೆಲಸಗಾರನಾಗಿದ್ದ ಪ್ರಮುಖ ಸಾಕ್ಷಿಯನ್ನ ಸಂಪರ್ಕಿಸಿದ್ದ ಪೆÇಲೀಸರು. ಆ ಸಂದರ್ಭದಲ್ಲಿ ಎಲ್ಲಾ ವಿಷಯವನ್ನು ಪೊಲೀಸರೆದುರು ಸಾಕ್ಷಿದಾರ ವಿವರಿಸಿ ಸಂಪೂರ್ಣ ಮಾಹಿತಿ ನೀಡಿದ್ದ ವಿಚಾರವನ್ನು ಸಂಗ್ರಹಿಸಿದ ಪೊಲೀಸರು ಆತನನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.