ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ 180 ಸಾಕ್ಷಿಗಳನ್ನು ಸಂಗ್ರಹಿಸಿದುದ, ಎರಡು ವಸ್ತುಗಳ ಬಗ್ಗೆ ಅವರಿಗೆ ತಲೆ ಬಿಸಿಯಾಗಿ ಪರಿಣಮಿಸಿದೆ.
ಕೊಲೆಗೆ ಸಂಬಂಧಪಟ್ಟ ಪ್ರತಿ ವಸ್ತುವನ್ನ ಪತ್ತೆ ಹಚ್ಚಿ ಸೀಜ್ ಮಾಡಿರುವ ಪೊಲೀಸರಿಗೆ ಆ ಎರಡು ಮೊಬೈಲ್ ಫೋನ್ ಗಳು ಮಾತ್ರ ಸಿಕ್ಕಿಲ್ಲ ಎನ್ನಲಾಗಿದೆ.
ಆ ಎರಡು ಮೊಬೈಲ್ ಫೋನ್ ಗಳ ಪತ್ತೆಗೆ ಪೊಲೀಸರ ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇನ್ನು ಎರಡು ಫೋನ್ಗಳು ಪತ್ತೆಯಾಗದಿದ್ದು, ಈ ಫೋನ್ಗಳು ರೇಣುಕಾಸ್ವಾಮಿಗೆ ಸೇರಿದ್ದಾಗಿದೆ ಎನ್ನಲಾಗಿದೆ.
ಕೃತ್ಯ ನಡೆದು 25 ದಿನ ಕಳೆದರೂ ಸಿಗದ ರೇಣುಕಾಸ್ವಾಮಿ ಫೋನ್ಗಳು ಇನ್ನು ದೊರೆತಿಲ್ಲ. ಪ್ರಕರಣದ ಪ್ರಮುಖ ಎವಿಡೇನ್ಸ್ ಅಗಿರುವ ಮೊಬೈಲ್ ಫೋನ್ ಗಳು. ರೇಣುಕಾಸ್ವಾಮಿ ಮೃತದೇಹ ಎಸೆದ ಜಾಗದಲ್ಲೆ ಆ ಮೊಬೈಲ್ಗಳನ್ನು ಸಹ ಆರೋಪಿಗಳು ಎಸೆದಿದ್ದರು ಎಂದು ಹೇಳಲಾಗಿದ.ಎಸುಮನಹಳ್ಳಿ ರಾಜಕಾಲುವೆಯಲ್ಲಿ ಫೋನ್ಗಳನ್ನು ಆರೋಪಿಗಳು ಎಸೆದು ಹೋಗಿದ್ದು, ತನಿಖೆಗೆ ಸಂಬಂಧಿಸಿದ ಪ್ರತಿ ವಸ್ತುವನ್ನ ಪತ್ತೆ ಮಾಡ್ತಿರೋ ಪೊಲೀಸರಿಗೆ ಎಷ್ಟೇ ಶೋಧ ಮಾಡಿದ್ರು ಮೊಬೈಲ್ ಫೋನ್ ಗಳು ಮಾತ್ರ ಪತ್ತೆಯಾಗುತ್ತಿಲ್ಲ.
ಈಗಾಗಲೇ ರೇಣುಕಾಸ್ವಾಮಿ ಬಳಸುತ್ತಿದ್ದ ನಂಬರ್ ಮೇಲೆ ಹೊಸ ಸಿಮ್ ಕಾರ್ಡ್ ಪಡೆದ ತನಿಖಾ ತಂಡ.ಸಿಮ್ ಕಾರ್ಡ್ ಆಕ್ಟಿವ್ ಮಾಡಿ ಡೇಟಾ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಚಾಟ್ ಮಾಡಿದ ಮೂಲ ಮೊಬೈಲ್ ಫೋನ್ ಪ್ರಮುಖ ಸಾಕ್ಷ್ಯಾಧಾರವಾಗಿದ್ದು, ಮೂಲ ಸಾಕ್ಷ್ಯವೇ ಸಿಗದ ಹಿನ್ನೆಲೆ ಪೊಲೀಸರಿಗೆ ತಲೆಬಿಸಿ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.