ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಲಾಗಿದೆ.ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದ ಮುಂದೆ ಕೊಲೆ ಆರೋಪಿಗಳೆನ್ನಲಾದ ಪವಿತ್ರಗೌಡ, ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಹಾಜರಾಗಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿ ಯಾರೂ ಕೂಡ ನ್ಯಾಯಾಲಯದ ವ್ಯಾಪ್ತಿ ಪ್ರದೇಶವನ್ನು ಬಿಟ್ಟು ಹೋಗಬಾರದು ಎಂದು ನಿರ್ಬಂಧ ವಿಧಿಸಿದರು.ಕೂಡಲೇ ಪವಿತ್ರಗೌಡ ತಮಗೆ ಒಂದು ತಿಂಗಳು ವಿನಾಯಿತಿ ಬೇಕು ಎಂದು ಅರ್ಜಿ ಸಲ್ಲಿಸಿದರು. ಕೋರ್ಟ್ಗೆ ಹಾಜರಾಗಿದ್ದ ವೇಳೆ ದರ್ಶನ್ ಮತ್ತು ಪವಿತ್ರ ಪರಸ್ಪರ ಮಾತುಕತೆ ನಡೆಸಿ ಇಬ್ಬರ ಆರೋಗ್ಯದ ಬಗ್ಗೆ ಮಾತುಕತೆ ನಡೆಸಿದರು.