ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ಹೋರಾಟಕ್ಕೆ ಸ್ಪಂದಿಸಿ,ಜನಪ್ರತನಿಧಿಗಳು ರೈತರನ್ನು ಪ್ರತಿಕ್ರಯಿ ನೀಡದೇ ಅವಮಾನ ಮಾಡಿರವರ ವಿರುದ್ಧ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷ ಹರಳಪುರ ಮಂಜೇಗೌಡ್ರು ಅಗ್ರಹಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ವಿಶ್ವಚೇತನ ರೈತನಾಯಕ ಪ್ರೊ .ಎಂ.ಡಿ.ನಂಜುಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತರ ಸಂಘ
ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನೇಮಕಮಾಡಿದರು ಹಾಗೂ ಚನ್ನರಾಯಪಟ್ಟಣ ಭೂಸ್ವಾಧೀನವಿರೋಧಿ ಹೋರಾಟ ಸಮಿತಿ ರೈತರಿಗೆ ಬೆಂಬಲ ನೀಡುವ ಕುರಿತು ಸಭೆ ನಡೆಸಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದು ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ,ಹಾಗಾಗಿ ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣ ರೈತರ ಪರವಾಗಿ ಉಗ್ರ ಹೋರಾಟ ಮಾಡುವುದರ ಮೂಲಕ ಬೆಂಬಲವನ್ನು ಸೂಚಿಸಲಿದ್ದೇವೆ ಹಾಗೂ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೂತನ ಯುವ ಘಟಕದ ಅಧ್ಯಕ್ಷರಾಗಿ ವಿನೋದ್ ಗೌಡ ಮತ್ತು ಪ್ರಚಾರ ಸಮಿತಿಯ ಕಾರ್ಯಧ್ಯಕ್ಷರಾಗಿ ಶಂಕರೇಗೌಡ್ರು ನೇಮಕಗೊಂಡಿದ್ದಾರೆ ಎಂದು ತಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ಡಾ.ಎನ್.ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರ್ ವಿಂಎಂ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ .ಕೃಷ್ಣಪ್ಪ, ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರಾದ ನಂಜೇಗೌಡ್ರು ಸೇರಿದಂತೆ ಹಲವಾರು ರೈತ ಸದಸ್ಯರು ಮತ್ತಿತರರು ಇದ್ದರು.