ದೇವನಹಳ್ಳಿ: ರೈತರು ಸರಕಾರ ಹಾಗೂ ಬ್ಯಾಂಕ್ಗಳಿಂದ ದೊರೆಯುವ ಸಾಲಸೌಲಭ್ಯವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾದ ಪ್ರಾದೇಶಿಕ ಕಚೇರಿ ದೇವನಹಳ್ಳಿ ವ್ಯವಸ್ಥಾಪಕರು ರತನ್ಕುಮಾರ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಹಾರಿಕ ಕಚೇರಿಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಈ ದೇಶದ ಭದ್ರ ಬುನಾದಿ ರೈತರು ಆರ್ಥಿಕವಾಗಿ ಸ್ಥಿತಿವಂತರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲಿದೆ ನಮ್ಮ ಬ್ಯಾಂಕ್ನಿಂದ ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ರೈತರಿಗೆ ಕುರಿ ಸಾಕಾಣೆ, ಹಂದಿಸಾಕಾಣೆ, ಕೃಷಿ ಚಟುವಟಿಕೆ, ಕೃಷಿಉದ್ಯಮಗಳ ಸ್ಥಾಪನೆಗೆ ಸಾಲ ನೀಡಲಾಗಿದೆ ಅನೇಕ ರೈತರು ಸಾಲ ಸೌಲಭ್ಯದ ಪ್ರಯೋಜನ ಪಡೆದು ಆರ್ಥಿಕವಾಗಿ ಮುಂದೆಬಂದಿದ್ದಾರೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ನ ರಿಲೇಷನ್ಶಿಪ್ ಗ್ರಾಮಂತರ ವ್ಯವಸ್ಥಾಪಕರಾದ ವಿನಯ್.ಟಿ.ಜೆ ಮಾತನಾಡಿ ರೈತರು ಪ್ರಗತಿಗೆ ಬೇಕಾದ ಎಲ್ಲಾ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ರೈತರು ಸಾಲ ಪಡೆಯಲು ಅಲೆದಾಡಬೇಕಿಲ್ಲ ಬ್ಯಾಂಕಿನ ಅಗತ್ಯ ದಾಖಲೆಗಳನ್ನು ನೀಡಿದರೆ ತ್ವರಿತವಾಗಿ ಸಾಲ ಮಂಜೂರು ಮಾಡಲಾಗುವುದು ರೈತರಿಗಾಗಿ ಅನೇಕ ಸಾಲ ಸೌಲಭ್ಯಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರೈತ ಗೋವಿಂದರಾಜು ಮಾತನಾಡಿ ರೈತ ಸಮೃದ್ಧಿಯಾಗಿದ್ದರೆ ದೇಶ ಸಮೃದ್ದಿಯಾಗಿರುತ್ತದೆ. ನಾನು ವ್ಯವಸಾಯ ಹಾಗೂ ಕೃಷಿ ಉದ್ದಿಮೆಯಿಂದ ಆರ್ಥಿಕವಾಗಿ ಬೆಳೆದಿದ್ದೇನೆ ನಾನು ಎಸ್.ಬಿ.ಐನಲ್ಲಿ ಸಾಲ ಪಡೆದಿದ್ದೇನೆ ರೈತರಿಗಾಗಿ ಅನೇಕ ಯೋಜನೆಗಳಿದ್ದು ರೈತರು ಹಾಗೂ ಕೃಷಿ ಉದ್ದಿಮೆದಾರರು ಪಡೆದ
ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ನಮ್ಮಂತ ರೈತರಿಗೆ ಮತ್ತೆ ಸಾಲ ಕೊಡಲು ಸಾಧ್ಯವಾಗುತ್ತದೆ. ರೈತರು ವ್ಯವಸಾಯದ ಜೊತೆಗೆ ಸಣ್ಣ ಕೃಷಿ ಉದ್ದೆಮೆಗಳನ್ನು ಪ್ರಾರಂಭಿಸದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಚಿಕ್ಕಬಳ್ಳಾಪುರ ಪಶುಪಾಲನಾ ಇಲಾಖೆಯ ತಾಂತ್ರಿಕ ಸಾಹಯಕ ನಿರ್ದೇಶಕಿ ಡಾ.ಶೀಲಾ ಮಾತನಾಡಿ ರೈತರಿಗೆ ಬ್ಯಾಂಕ್ನಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಇದೆ. ಚಿಕ್ಕಬಳ್ಳಾಪುರ, ಕೋಲಾರ ರೈತರು ಸಾಲ ಸೌಲಭ್ಯವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎನ್.ಎಲ್.ಎಂ ಸ್ಕೀಂ ಮದ್ಯಮವರ್ಗದ ಜನರು ಉದ್ಯಮದಾರರನ್ನಾಗಿ ಬದಲಿಸಲು ಕೇಂದ್ರ ಸರಕಾರ ಶೇ.50 ಸಹಾಯಧನ ನೀಡುತ್ತಿದೆ ಕುರಿ, ಹಂದಿ, ಸಾಕಾಣೆ ಕಡಿಮೆಯಾಗುತ್ತಿದೆ. ಹಂದಿ ಸಾಕಾಣೆ ಮಾಡುವವರು ಮುಂದೆ ಬರುತ್ತಿಲ್ಲ, ಚಿಕ್ಕಬಳ್ಳಾಪುರದಲ್ಲಿ ಒಬ್ಬ ಮಹಿಳೆ ಹಂದಿ ಸಾಕಾಣೆ ಮಾಡಿ ಪ್ರಶಸ್ತಿ ಗಳಿಸಿದ್ದಾರೆ.
ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಶಡ್ ನಿರ್ಮಾಣ ಮಾಡಿ ಉತ್ತಮ ಲಾಭಗಳಿಸುತ್ತಿದ್ದಾರೆ ರೈತರು ಸಣ್ಣ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಬೇಕು ಅದಕ್ಕೆ ಬೇಕಾದ ಸಾಲ ಸೌಲಭ್ಯವನ್ನು ಬ್ಯಾಂಕ್ಗಳು ಒದಗಿಸುತ್ತವೆ ಎಂದರು.ಇದೆ ವೇಳೆ ಲೀಡ್ ಬ್ಯಾಂಕ್ನವ್ಯವಸ್ಥಾಪಕರಾದ ಮಧುಕರ್, ಎಸ್.ಬಿ.ಐನ ಮುಖ್ಯ ವ್ಯವಸ್ಥಾಪಕರಾದ ಯೋಗಾನಂದ್, ನರೇಶ್, ಹರಿಪ್ರಸಾದ್ ರೆಡ್ದಿ. ಎ.ವಿ.ಪ್ರಸಾದ್ ರೈತರು ಬ್ಯಾಂಕ್ನ ಸಿಬ್ಬಂದಿಗಳು, ಕೃಷಿ ಉದ್ದಿಮೆದಾರರು ಇದ್ದರು.