ಚನ್ನರಾಯಪಟ್ಟಣ: ರೈತರು ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ವ್ಯವಹರಿಸಿ ಸಹಕಾರ ನೀಡಿದರೆ ಸಂಘ ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂದು ಜೀಪಂ ಮಾಜಿ ಸದಸ್ಯ ಸಹಕಾರ ರತ್ನ ಪುರಸ್ಕೃತ ಜಿ ಲಕ್ಷ್ಮೀನಾರಾಯಣ್ ಹೇಳಿದರು.
ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023 24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಪ್ರತಿಯೊಂದು ಕಸಬುದಾರರಿಗೂ ರೈತರಿಗೆ ಸಾಲ ಸೌಲಭ್ಯ ಸಿಗುತ್ತದೆ ರೈತರು ರಾಸಾಯನಿಕ ಗೊಬ್ಬರ ಎಲ್ಲವವನ್ನು ರೈತರು ವ್ಯವಹಾರಿಸಬೇಕು ಹೆಚ್ಚಿನ ರೀತಿಯಲ್ಲಿ ಸದಸ್ಯರು ಸಹಕಾರ ನೀಡಿದರೆ ಸಂಘ ಇನ್ನಷ್ಟು ಬಲಿಷ್ಠವಾಗುತ್ತದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಎಚ್ ಆರ್ ಮುರಳಿ ಮಾತನಾಡಿ ನಮ್ಮ ಸಂಘದಲ್ಲಿ ಎಲ್ಲಾ ಸದಸ್ಯರು ಹಣವನ್ನು ಠೇವಣಿ ಇಟ್ಟರೆ ಅದರ ಪ್ರಕಾರ ಬಡ್ಡಿ ಸಿಗುತ್ತದೆ ಸಂಘವು ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರುಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ ರಮೇಶ್ ಮಾತನಾಡಿ ಚನ್ನರಾಯಪಟ್ಟಣ ವಿಧೋದ್ದೇಶ ಸಂಘವು ಹೋಬಳಿ ಮಟ್ಟದಲ್ಲಿ ಇರುವುದರಿಂದ ಪಕ್ಕದಲ್ಲಿ ಕೈಗಾರಿಕಾ ಪ್ರದೇಶ ಆಗುತ್ತಿರುವುದರಿಂದ ರೈತರು ಹೆಚ್ಚಿನ ಠೇವಣಿ ಹಣ ಇಟ್ಟರೆ ಸಂಘವು ಅಭಿವೃದ್ಧಿಯಾಗುತ್ತದೆ ಸಂಘಕ್ಕೆ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಬರುವ ಅನುದಾನ ನೀಡುತ್ತೇವೆ ಅದನ್ನು ಬಳಸಿಕೊಂಡು ಸಂಘ ಅಭಿವೃದ್ಧಿ ಮಾಡಿಕೊಂಡರೆ ರೈತರಿಗೆ ಹೆಚ್ಚು ಅನುಕೂಲ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ವೆಂಕಟೇಶ್ ಗ್ರಾಪಂ ಅಧ್ಯಕ್ಷ ಮರೇಗೌಡ ಸಂಘದ ಉಪಾಧ್ಯಕ್ಷ ಡಿ ಕೃಷ್ಣಪ್ಪ ನಿರ್ದೇಶಕರುಗಳಾದ ಎ ನಂಜೇಗೌಡ ಸಿಎಂ ವಸಂತ್ ಎನ್ ಪಿಳ್ಳೆ ಗೌಡ ಬಿ ಎಂ ಮುನಿಕೃಷ್ಣಪ್ಪ ಟಿ ರಾಜಣ್ಣ ಎಚ್ ಡಿ ದೇವರಾಜ್ ಟಿ ನಾಗರಾಜ್ ಕಲಾ ವೆಂಕಟೇಶ್ ಮಂಜುಳಾ ಬಿಡಿ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಪ್ರಕಾಶ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ವಿ ನಾರಾಯಣಸ್ವಾಮಿ ಗುಮಾಸ್ತ ಮುನಿರಾಜ್ ಇನ್ನು ಮುಂತಾದವರು ಹಾಜರಿದ್ದರು.