ದೇವನಹಳ್ಳಿ: ರೈತರ ಜಮೀನನ್ನು ಕಾನೂನಿನ ಮೂಲಕ ಕಬಳಿಸಲು ಹೊರಟಿರುವ ವಕ್ಫ್ ಮಂಡಳಿಯ ಕೃತ್ಯವನ್ನು ರಾಜ್ಯದ ರೈತರು ಮತ್ತು ಸಾರ್ವಜನಿಕರು ತೀವ್ರವಾಗಿ ವಿರೋಧಿಸಿ ಖಂಡಿಸಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ತಾಲೂಕು ಅಧ್ಯಕ್ಷ ಶಿವಕುಮಾರ್ ಆರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ(ರಿ) ವತಿಯಿಂದ ನ. 26 ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಲಿತ, ಶೋಷಿತ, ರೈತರ ಸಾರ್ವಜನಿಕರ ಭೂಮಿಯನ್ನು ಉಳಿಸಲು ಬೃಹತ್ ರೈತ ಘರ್ಜನಾ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಠ, ಮಂದಿರಗಳ ಸಾವಿರಾರು ವರ್ಷಗಳ ಭೂಮಿಯನ್ನು ಘೋಷಿಸಿ ದುಷ್ಟತನವನ್ನು ಮೆರೆದಿರುವ ಸರ್ಕಾರದ ನಿಲುವನ್ನು ವಿರೋಧಿಸಿ ರಾಜ್ಯದಲ್ಲಿ ರೈತರ ಸ್ವಾಭಿಮಾನ ಬದುಕಿಗೆ ಕೊಳ್ಳಿ ಇಡಲು ಹೊರಟಿರುವ ಕರಾಳ ವಕ್ಫ್ ಕಾಯ್ದೆ ರದ್ದು ಪಡಿಸಲು ಆಗ್ರಹಿಸೋಣ ಕಬಳಿಸಿದ ಭೂಮಿಯನ್ನು ಉಳಿಸಿಕೊಳ್ಳಲು ಪಣತೊಡೋಣ ಸಾವಿರ ಸಂಖ್ಯೆಯಲ್ಲಿ ರೈತರು ಜನರು ಸ್ವಇಚ್ಛೆಯಿಂದ ಸೇರಿ ದುಷ್ಟ ಶಕ್ತಿಗಳ ವಿರುದ್ಧ ಘರ್ಜಿಸೋಣ ಬನ್ನಿ ಎಲ್ಲರೂ ಒಂದಾಗಿ ಪ್ರತಿಭಟಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಜಿಲ್ಲಾಧ್ಯಕ್ಷ ನಾಗರಾಜಯ್ಯ, ಕಾರ್ಯದರ್ಶಿ ಎಂ. ಶಶಿಧರ್, ತಾಲೂಕು ಸಮಿತಿಯ ಸದಸ್ಯರಾದ ಎಸ್ .ಮಂಜುನಾಥ್, ಎಂ ಅಂಜಿನಪ್ಪ, ಮಹಿಳಾ ಪ್ರಮುಖ ನೇತ್ರಾವತಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.