ಬಂಗಾರಪೇಟೆ: ಪ್ರತಿಯೊಬ್ಬ ಷೇರುದಾರರಿಗೂ ಸಹಕಾರ ಸಂಘದಿಂದ ಸಿಗಬೇಕಾದ ಸೌಲಭ್ಯವನ್ನು ಪ್ರಾಮಾಣಿಕವಾಗಿ ನೀಡುವ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಲಾಗುತ್ತದೆ ಎಂದು ಹುದುಕುಳ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾದ ಅ.ನಾ. ಹರೀಶ್ ಅವರು ತಿಳಿಸಿದ್ದಾರೆ.
ಹುದುಕುಳ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡ 2023-24ನೇ ಸಂಘದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಹುದುಕುಳ ವಿವಿಧೋದ್ದೇಶ ಗ್ರಾಮೀಣ ಪ್ರಾರ್ಥಮಿಕ ಮತ್ತು ಕೃಷಿ ಸಹಕಾರ ಸಂಘವು ಈಗಾಗಲೇ ಡಿಸಿಸಿ ಬ್ಯಾಂಕ್ ಕೋಲಾರ ಇವರ ಸಹಕಾರ ದಿಂದ ಸುಮಾರು ಕೋಟ್ಯಾಂತರ ರೂಪಾಯಿ ಹಣವನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ, ರೈತರಿಗೆ ಕೃಷಿ ಸಾಲ, ವ್ಯಾಪಾರ ಸಾಲ, ಪುರುಷರ ಸಂಘಗಳಿಗೆ ಸಾಲ, ವೈಯಕ್ತಿಕ ಸಾಲಗಳಾಗಿ ನೀಡುವ ಮೂಲಕ ರೈತರ ಬೆನ್ನೆಲುಬಾಗಿ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂದಿನ 2024-25 ನೇ ವರ್ಷದಲ್ಲಿ ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಸರ್ವ ಸದಸ್ಯರ ಸಭೆಯಲ್ಲಿ ಆಗಮಿಸಿದ ವಿವಿಧ ಗ್ರಾಮಗಳ ಷೇರುದಾರರಿಗೆ, ತಮ್ಮ ಉಳಿತಾಯ ಖಾತೆಗಳನ್ನು ಮತ್ತು ಠೇವಣಿಗಳನ್ನ ಇಡುವಂತೆ ಕೋರಿ ಸಂಘವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಲಹೆಯನ್ನ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಟರಾಜ್ ನಿರ್ದೇಶಕರಾದ ಬುಲ್ಲೆಟ್ ನಾಗರಾಜ್, ಮುನಿಸ್ವಾಮಿ ಗೌಡ, ಎಲ್ ಐಸಿ ವೆಂಕಟೇಶ್ , ವಟ್ರಕುಂಟೆ ಶ್ರೀನಿವಾಸ್, ಎಂ.ಶ್ರೀನಿವಾಸ್, ರತ್ನಮ್ಮ ಮುನಿರಾಜ್, ರಾಮಕೃಷ್ಣಪ್ಪ, ಕೆ.ಪಿಳ್ಳಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೆಚ್ಎಮ್ ರವಿ ಸದಸ್ಯರಾದ ನಯಾಜ್ , ಹನುಮಪ್ಪ, ಮೂರ್ತಿ, ಸುರೇಶ್, ಮುಖಂಡರಾದ ಪಾಕರಹಳ್ಳಿ ಚಂದ್ರಣ್ಣ , ವೆಂಕಟಾಚಲಪತಿ, ಪ್ರಕಾಶ್, ಮಂಜುನಾಥ್, ಮುಖ್ಯನಿವರ್ಹಕಾಧಿಕಾರಿ ವೆಂಕಟೇಶ್, ಸುನೀಲ್ ಕುಮಾರ್, ರಾಜೇಶ್ವರಿ ಮೊದಲಾದವತು ಪಾಲ್ಗೊಂಡಿದ್ದರು.