ಬೆಂಗಳೂರು: ಒಬ್ಬರ ಕೈ ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಅಣ್ಣತಂಗಿ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ಶಿಡ್ಲಘಟ್ಟ ಪ್ರೇಮ ನಗರ ನಿವಾಸಿಗಳಾ ಪ್ರಭು(25) ತಂಗಿ ನವ್ಯ(23) ಮೃತ ಪಟ್ಟ ದುರ್ದೈವಿಗಳಾಗಿದ್ದು, ಶಿಡ್ಲಘಟ್ಟ ನಗರದ ಶೆಟ್ಟಪ್ಪನವರ ತೋಪಿನ ರೈಲ್ವೆ ಹಳಿಯ ಬಳಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಇತ್ತೀಚಿಗೆ ಮೃತರ ತಾಯಿ ನಿಧನರಾಗಿದ್ದು ತಮ್ಮ ತಾಯಿಯೊಂದಿಗೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಅಣ್ಣ ತಂಗಿ ತಾಯಿ ನಿಧನ ಸಹಿಸಲಾರದೆ ತೀವ್ರವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೇ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.