ಬೆಂಗಳೂರು: ರೈಲುಗಳು ಪಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸುವಾಗ / ಕೊಂಡೊಯ್ಯುವಾಗ ರೈಲ್ವೆ ಹಳಿಗಳಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪ್ರತಿ ಏಳು ಕಿಲೋಮೀಟರ್ಗೆ ಒಬ್ಬರಂತೆ ಲೈನ್ ಮೆನ್ಗಳನ್ನು ಕಾವಲಿಗೆ ನೇಮಿಸಲಾಗಿರುತ್ತದೆ ಎಂದು ರೈಲ್ವೆ ಎಸ್ ಪಿ ಸೌಮ್ಯಲತಾ ತಿಳಿಸಿದರು.
ವಿಶೇಷವಾಗಿ ಕತ್ತಲು ಇರುವ ಜಾಗಗಳಲ್ಲಿ ಮಧ್ಯರಾತ್ರಿ ಒಂದರಿಂದ ಮುಂಜಾನೆ 5 ಗಂಟೆಯ ತನಕ ಗಸ್ತನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜಸ್ಥಾನದ ಅಜ್ಮೀರ್ ನಲ್ಲಿ ಭಾನುವಾರ ರಾತ್ರಿ ಕೆಲವು ಕಿಡಿಗೇಡಿಗಳು ರೈಲ್ವೆ ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟು ಚಲಿಸುವ ರೈಲಿಗೆ ತೊಂದರೆ ಉಂಟು ಮಾಡಲು ಪ್ರಯತ್ನಿಸಿದ್ದರು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ ಎಂದಿದ್ದಾರೆ.
ಈ ಸಂಬಂಧ ಕರ್ನಾಟಕ ರೈಲ್ವೆ ಎಸ್ ಪಿ ಅವರೊಂದಿಗೆ ಮಾತನಾಡಿದಾಗ ಕೇಂದ್ರೀಯ ರೈಲ್ವೆ ಪೊಲೀಸ್ ಪಡೆ ಮತ್ತು ಕರ್ನಾಟಕ ಪೊಲೀಸ್ ಜೊತೆಗೂಡಿ ರೈಲು ಚಲಿಸುವ ಕೆಲವು ಮಾರ್ಗಗಳನ್ನು ಗುರುತಾಗಿಟ್ಟುಕೊಂಡು ಈ ಜಾಗಗಳಲ್ಲಿ ವಾಸಿಸುವ ಜನರುಗಳಿಗೆ ಎಚ್ಚರಿಕೆ ಮತ್ತು ತಿಳುವಳಿಕೆ ನೀಡುವುದನ್ನು ಆಗಿಂದಾಗೆ ಮಾಡುತ್ತಿರುತ್ತೇವೆ ಎಂದು ಹೇಳಿದರು.
18 ಪೊಲೀಸ್ ಠಾಣೆ ಹೊಂದಿರುವ ಕರ್ನಾಟಕ ರಾಜ್ಯ ರೈಲ್ವೆ ಪೊಲೀಸ್ ಎಸ್ ಪಿ ಸೇರಿದಂತೆ 850 ಸಿಬ್ಬಂದಿಯನ್ನು ಹೊಂದಿರುತ್ತದೆ.ಅಂದಾಜು ಸುಮಾರು 3000 ಕಿಲೋಮೀಟರ್ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಹಳಿ ಹೊಂದಿರುತ್ತದೆ, ಇವುಗಳ ಉಸ್ತುವಾರಿಯನ್ನು ರೈಲ್ವೆ ಇಲಾಖೆಯಲ್ಲಿ ನೇಮಕವಾಗಿರುವ ವೆಂಡರ್ಗಳು ಮತ್ತು ಲೈನ್ ಮ್ಯಾನ್ ಸಹಾಯದೊಂದಿಗೆ ಜಾಸ್ತಿ ನಿಗಾ ವಹಿಸಲು ಸೂಚನೆ ನೀಡಿಲಾಗಿದೆ ಎಂದಿದ್ದಾರೆ.ಇದಲ್ಲದೆ ಕೆಲವು ಪ್ರದೇಶಗಳಲ್ಲಿ ರೈಲು ಚಲಿಸುವ ಸಮಯದಲ್ಲಿ ಕೆಲವು ಕಿಡಿಗೇಡಿಗಳು ರೈಲಿಗೆ ಕಲ್ಲುಗಳನ್ನು ಸಹ ಹೊಡೆಯುವುದನ್ನು ತಪ್ಪಿಸಲು ಆಗಾಗ ವಿಶೇಷ ತಪಾಸಣೆಯನ್ನು ನಡೆಸುತ್ತಿರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.