ಬೆಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿರು 90 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟರಿ ಕ್ಲಬ್ ಆಫ್ ಬೆಂಗಳೂರು ಸೌರಶಕ್ತಿಯ ನೆರವನ್ನು ನೀಡುತ್ತಿದೆ.1934 ರಲ್ಲಿ ಸ್ಥಾಪನೆಯಾದ ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ 90 ನೇ ವರ್ಷದಲ್ಲಿದ್ದು, 334 ಸದಸ್ಯರನ್ನು ಹೊಂದಿರುವುದಲ್ಲದೇ ಭಾರತದ ಅತ್ಯಂತ ದೊಡ್ಡ ರೋಟರಿ ಕ್ಲಬ್ಗಳಲ್ಲಿ ಒಂದಾಗಿದೆ.
ರೋಟೇರಿಯನ್ ಗೌರಿ ಓಝಾ ಅವರು ಈ ಪ್ರತಿಷ್ಠಿತ ಕ್ಲಬ್ನ 90 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಮುದಾಯಕ್ಕೆ ನಮ್ಮ 90 ವರ್ಷಗಳ ಸೇವೆಯ ಸಂಸ್ಮರಣೆಗಾಗಿ, 2024-25ರ ಸಾಲಿನಲ್ಲಿ ನಾವು ಕರ್ನಾಟಕದ 90 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆಯ ಒಟ್ಟು ವೆಚ್ಚ 2.7 ಕೋಟಿ ರೂ. ಗಳಾಗಿರುತ್ತದೆ, ನಾವು ಹೆರಿಗೆ ಕೋಣೆ, ಲಸಿಕೆ ಫ್ರೀಜರ್ಗಳು, ಪ್ರಯೋಗಾಲಯಗಳು ಮುಂತಾದವುಗಳ ಕಡೆಗೆ ಗಮನ ಕೇಂದ್ರೀಕರಿಸುತ್ತೇವೆ.
ಇತರೆ ನಿಗದಿತ ಯೋಜನೆಗಳು ಸಾಮಾನ್ಯ ರೀತಿಯಲ್ಲಿ ನಡೆಯಲಿವೆ ಎಂದರು.ರೋಟೇರಿಯನ್ಗಳು, ಕುಟುಂಬಗಳು ಮತ್ತು ಹಿತೈಷಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗೌರಿ ಓಝಾ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳ ಕಡೆಗೆ ಆರ್ಸಿಬಿ ದೃಷ್ಟಿ ಹರಿಸಲಿದೆ ಎಂದು ಪ್ರಕಟಿಸಿದರು.
Rtnಡಾ ಮುಸ್ತಲಿ ವಾಘ್, Rtnರೋಹಿದಾಸ್ ಭಟ್ Rtn ವಿನೀತಾ ಚಿನಪ್ಪ, Rtnಗಿರೀಶ್ ರಾಮನಾಥನ್, Rtn ಸೋಹಿಲ್
ಶಾ, Rtn ಗೌರಿ ಓಜಾ Rtn ನಳಿನಿ ನಂಜುಂಡಯ್ಯ, Rtn ಸುಕೇನ್ ಪದ್ಮನಾಭ, Rtnಶ್ರೀಹರಿ, Rtnಕವಿತಾ ಮುತ್ತಪ್ಪ, Rtn ಶ್ರೀನಿವಾಸ್ ವೆಲಿದ್ ಹಾಜರಿದ್ದರು.