ನೆಲಮಂಗಲ: ಪ್ರತೀ ವರ್ಷವೂ ನೂತನ ನಾಯಕತ್ವದೊಂದಿಗೆ ಹೊಸ ಸಾಮಾಜಿಕ ಸೇವಾಕಾರ್ಯಗಳನ್ನು ನೆರವೇರಿಸಲು ವಿಶ್ವದ ಅತಿದೊಡ್ಡ ಸಂಘನೆಯಾಗಿ ರೋಟರಿ ಸಂಸ್ಥೆ ಮುಂಚೂಣ ಯಲ್ಲಿದ್ದು ಟೀಮ್ ಜೋಶ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ರೋಟರಿ ಜಿಲ್ಲಾ ಪಾಲಕ ಎನ್.ಎಸ್.ಮಹದೇವಪ್ರಸಾದ ತಿಳಿಸಿದರು.
ನಗರಸಭಾ ವ್ಯಾಪ್ತಿಯಲ್ಲಿನ ಹೆದ್ದಾರಿಯಲ್ಲಿರುವ ವಿವಿಎಸ್ ಗಾರ್ಡನ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿಗೆ ರೋಟರಿ ಸಂಸ್ಥೆಗೆ ನೂತನ ಸಾರಥಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ರೋಟರಿ ಸಂಸ್ಥೆಯಡಿ ಯಾವುದೇ ಜಾತಿ, ಧರ್ಮ ಮತ್ತು ಲಿಂಗ ಭೇಧವಿಲ್ಲದೇ ಕಾರ್ಯನಿರ್ವಹಿಸುವ ಏಕೈಕ ಸಾರ್ವಜನಿಕರ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ವಕೀಲ ರೋ.ಸುರೇಂದ್ರನಾಥ್ ಪದಗ್ರಹಣ ಮಾಡಿದ ತರುವಾಯ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಬಡವರಿಗೆ ಆರೋಗ್ಯ ಕಾಯ್ದುಕೊಳ್ಳುವ ಮತ್ತು ಬಡವಿದ್ಯಾರ್ಥಿಗಳ ಶೈಕ್ಷಣ ಕ ಬೆಳವಣ ಗೆಗೆ ಹಾಗೂ ಸಾಮಾನ್ಯ ಜನತೆತ ಪರವಾಗಿ ಅಗತ್ಯವಿರುವ ಸೇವಾ ಕಾರ್ಯಗಳನ್ನು ಕ್ರಿಯಾಯೋಜನೆಗಳಾಗಿ ರೂಪಿಸಿಕೊಂಡು ರೋಟರಿ ಸಂಸ್ಥೆಯು ಸೇವಾಕೈಂಕರ್ಯವನ್ನು ಕೈಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಎನ್.ಬಿ.ಕ್ಷಡಾಕ್ಷರಿ, ವಕೀಲ ಎಂ.ರವಿಕುಮಾರ್, ಉದ್ಯಮಿ ಜಗದೀಶ್, ಸುಯೋಗ ಕಂಪ್ಯೂಟರ್ಸ್ ಗ್ರೂಪಿನ ಎನ್.ಪಿ.ಸುಶೀಲ್ ಕುಮಾರ್, ಕೆ.ಆರ್.ವಿನಯಕುಮಾರ್, ಗ್ರಾಪಂ ಸದಸ್ಯ ನರೇಂದ್ರಕುಮಾರ್ ಸೇರಿದಂತೆ ಹಲವರು ರೋಟರಿ ಸಂಸ್ಥೆಗೆ ನೂತನ ಸದಸ್ಯತ್ವ ಪಡೆದುಕೊಂಡರು.
ಈ ಬಾರಿಯ ರೋಟರಿ ಸೇವಾ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕ ಚನ್ನಬಸಪ್ಪ ಅವರಿಗೆ ನೀಡಿಗೌರವಿಸಲಾಯಿತು.
ವೇದಿಕೆಯಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆಶಿವಕುಮಾರ್, ಸಹಾಯಕ ಜಿಲ್ಲಾ ಪಾಲಕ ಮಹೇಶ್, ನಿಕಟಪೂರ್ವ ರೋಟರಿ ಅಧ್ಯಕ್ಷ ಎಂ.ಟಿ.ನವೀನ್ ಕುಮಾರ್, ಮಾಜಿಅಧ್ಯಕ್ಷ ರೋ.ಟಿ.ನಾಗರಾಜು, ಎಸ್.ಮುನಿರಾಜಯ್ಯ, ಎಂ.ಎನ್.ಹರೀಶ್ ಕುಮಾರ್, ಸಿ.ಜಿ.ಮಂಜುನಾಥ್, ವಕೀಲ ಮಂಜುನಾಥ್, ರೋ.ವನರಾಜು, ರೋ.ಎಸ್.ಗಂಗರಾಜು, ಇನ್ರ್ವೀಲ್ ಅಧ್ಯಕ್ಷೆ ಉಮಾನಾರಾಯಣ್, ಶಾರದಾಸುಂದರೇಶ್ ಸೇರಿದಂತೆ ಹಲವರಿದ್ದರು.