ನಮ್ಮ ಕ್ಯಾಪ್ಟನ್ ನಾಯಕತ್ವ ಗುಣ ಪ್ರದರ್ಶಿಸಿದ್ದಾರೆ. ಅವರು ವಿಶ್ರಾಂತಿ ಬೇಕೆಂದು ಬಯಸಿದರು. ಇದು ನಮ್ಮಲ್ಲಿರುವ ಒಗ್ಗಟ್ಟನ್ನು ತೋರಿಸುತ್ತದೆ.ಇದು ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರು ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಹೇಳಿದ ಮಾತು. ಟಾಸ್ ಗೆದ್ದ ಬಳಿಕ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಜೊತೆ ಮಾತನಾಡಿದ ಅವರು ರೋಹಿತ್ ಶರ್ಮಾ ಪಂದ್ಯದಿಂದ ಹೊರಗುಳಿಯಲು ಏನು ಕಾರಣ ಎಂದು ಸ್ಪಷ್ಟಪಡಿಸಿದರು.
ಟಿಂಗ್ ಮಾಡಲು ನಿರ್ಧರಿಸಿದ್ದೇವೆ. ನಾವು ಉತ್ತಮ ಕ್ರಿಕೆಟನ್ನೇ ಆಡಿದ್ದೇವೆ. ಕೊನೆಯ ಪಂದ್ಯ ರೋಮಾಂಚಕಾರಿಯಾಗಿತ್ತು. ಪಿಚ್ ಮೇಲಿನ ಹುಲ್ಲಿನಿಂದ ತುಂಬಾ ತೊಂದರೆ ಆಗಬಹುದು ಎಂದು ಅನ್ನಿಸುವುದಿಲ್ಲ. ನಾವೀಗ ಸೋಲನ್ನು ಅರಗಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡಿದ್ದೇವೆ. ಈಗ ಇದರಿಂದ ಹೊರಬರಲು ಇಚ್ಛಿಸುತ್ತೇವೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ವಿಶ್ರಾಂತಿ ಬಯಸಿರುವುದರಿಂದ ಅವರ ಬದಲು ಶುಭಮನ್ ಗಿಲ್ ಮತ್ತು ಗಾಯಾಳು ಆಕಾಶ್ ದೀಪ್ ಬದಲು ಪ್ರಸಿದ್ಧ ಕೃಷ್ಣ ಅವರನ್ನು ತಂಡಕ್ಕೆ ಸೇರಿಸಿಕೊಳ್ಳ ಲಾಗಿದೆ ಎಂದು ತಿಳಿಸಿದ್ದಾರೆ.
ಆ ಬಳಿಕ ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ ಆಡದಿರಲು ಏನು ಕಾರಣ ಎಂಬ ರವಿ ಶಾಸ್ತ್ರಿ ಅವರ ಪ್ರಶ್ನೆಗೆ ತಮ್ಮ ನಾಯಕನ ಉದಾರತೆಯನ್ನು ಪ್ರಶಂಸಿಸಿದ್ದಾರೆ.
ಫಾರ್ಮ್ ನಲ್ಲಿ ಇಲ್ಲದ ಅವರು ತಾವಾಗಿಯೇ ವಿಶ್ರಾಂತಿ ಬಯಸಿದರು. ಇದು ತಂಡದ ಒಳಿತಿಗಾಗಿ ಮಾಡಿದ ನಿರ್ಧಾರ ಎಂದು ಹೇಳುವ ಮೂಲಕ ತಮ್ಮ ನಾಯಕನ ನಾಯಕತ್ವ ಗುಣವನ್ನು ಹೊಗಳಿದ್ದಾರೆ.ಹಾಗಾಗಿ ತಂಡದ ಮ್ಯಾನೇಜ್ ಮೆಂಟ್ ಫಾರ್ಮ್ ನಲ್ಲಿ ಇಲ್ಲದ ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟು ಭಾರತ ಕಣಕ್ಕಿಳಿಯುತ್ತಿದೆ. ಜಸ್ಪ್ರೀತ್ ಬುಮ್ಕಾ ಅವರಿಗೆ ನಾಯಕತ್ವ ಒಪ್ಪಿಸಲಾಗುತ್ತಿದೆ ಎಂದಾಗ ಬಹಳಷ್ಟು ಚರ್ಚೆಗಳಾಗಿದ್ದವು. ಆದರೆ “ಈ ತೀರ್ಮಾನ ತಂಡದ ಮ್ಯಾನೇಜ್ ಮೆಂಟ್ ನದ್ದಲ್ಲ, ಸ್ವತಃ ರೋಹಿತ್ ಶರ್ಮಾ ಅವರದ್ದೇ ಎಂಬ ಸಂದೇಶವನ್ನು ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರು ನೀಡಿದ್ದಾರೆ.