ಬೆಂಗಳೂರು: ರೌಡಿಶೀಟರ್ ಪಟ್ಟಿಯಲ್ಲಿದ್ದ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾವೇರಿ ಸುನಿಲ್ (25)ವರ್ಷ ಎಂಬಾತನ ಮೇಲೆ ಇಂದು ಬೆಳಿಗ್ಗೆ ಅತ್ತಿಬೆಲೆ ಇನ್ಸ್ಪೆಕ್ಟರ್ ರಾಘವೇಂದ್ರ ಗುಂಡು ಹಾರಿಸಿದ್ದಾರೆ.
ಹಳೆ ಪ್ರಕರಣಕ್ಕೆ ಸಂಬಂಧ ಹುಡುಕಾಟ ನಡೆಸುತ್ತಿದ್ದ ಸಮಯದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ಆನೇಕಲ್ ಹೊಸೂರ್ ರಸ್ತೆಯ ಬಳಿ ಈತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಚಾಕುವಿನಿಂದ ಇರಿಯಲು ಪ್ರಯತ್ನಿಸಿದಾಗ ಪೊಲೀಸರು ತಪ್ಪಿಸಿಕೊಳ್ಳಲು ಮೊದಲು ಆತನಿಗೆ ಶರಣಾಗಲು ಎಚ್ಚರಿಸಿದರು.ಈ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಆರೋಪಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದಾಗ ಇನ್ಸ್ಪೆಕ್ಟರ್ರವರ ಸರ್ವಿಸ್ ರಿವಾಲ್ವರ್ ನಿಂದ ಒಂದು ಸುತ್ತು ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಸೂರ್ಯ ಸಿಟಿ ಪೊಲೀಸ್ ಠಾಣೆಯ ರೌಡಿಶೀಟರ್ ಸಹ ಆಗಿರುತ್ತಾನೆ. ಸುಮಾರು 15 ವರ್ಷಗಳಿಂದ ಸಣ್ಣಪುಟ್ಟ ಅಪರಾಧಗಳಿಂದ ಹಿಡಿದು ಘೋರ ಅಪರಾಧಗಳ ತನಕ ಸುಮಾರು 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು.ಇತ್ತೀಚೆಗೆ ಈತನು ಸಾರ್ವಜನಿಕರಿಗೆ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ. ಈತನ ಮೇಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಈ ಹಿನೆಲೆಯಲ್ಲಿ ಇಂದು ಬೆಳಿಗ್ಗೆ ಈತನನ್ನು ಬಂಧಿಸಲು ಹೋದಾಗ ಈ ಘಟನೆ ಸಂಭವಿಸಿರುತ್ತದೆ.