ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ದಕ್ಷ ಅಧಿಕಾರಿಗಳಲ್ಲೊಬ್ಬರು ಎಂದು ಹೆಸರು ಮಾಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅವರು ಅವಳಿ ನಗರಗಳ ರೌಡಿಶೀಟರ್ ಗಳನ್ನು ಹುಬ್ಬಳ್ಳಿಯ ಸಿಎಅರ್ ಮೈದಾನಕ್ಕೆ ಕರೆಸಿ ಎಚ್ಚರಿಕೆ ನೀಡಿದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿ ಹಿಸ್ಟರಿ ಶೀಟರ್ ಎನಿಸಿಕೊಂಡಿರುವ ಸುಮಾರು 500 ಕ್ಕೂ ಹೆಚ್ಚು ಜನರನ್ನು ಇಂದು ಕರೆಸಲಾಗಿತ್ತು. ಒಬ್ಬ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಮುಂದಿನ ಸಾಲಿನಲ್ಲಿ ಕೊಲೆ ಮಾಡಿದ ಅಪರಾಧಿ ಇಲ್ಲವೇ ಹತ್ಯೆ ಆರೋಪ ಎದುರಿಸುತ್ತಿರುವವರನ್ನು ನಿಲ್ಲಿಸಲಾಗಿತ್ತು.