ಬೆಂಗಳೂರು: ಕೊಲೆ,ಸುಲಿಗೆ,ಬೆದರಿಕೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ಇಂದು ಮುಂಜಾನೆ ಸರ್ಜಾಪುರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆರೋಪಿ ಸೀನ ಬಂಧಿಸಲು ಬಂದ ಹಲ್ಲೆಗೊಳಗಾದ ಪೊಲೀಸರನ್ನು ಚಿಕಿತ್ಸೆಗೆ ರವಾನಿಸಲಾಗಿದೆ.ಕಳೆದ ಜ. 28ರಂದು ದೊಮ್ಮಸಂದ್ರ ಸಂತೆ ಮೈದಾನದಲ್ಲಿ ನಡೆದಿದ್ದ ಮಾಜಿ ರೌಡಿ ಶೀಟರ್ ಮುಸರಿ ವೆಂಕಟೇಶನ ಕೊಲೆ ಪ್ರಕರಣದಲ್ಲಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಭಾಗಿಯಾಗಿದ್ದರು.
ಪೊಲೀಸರು ಪ್ರಕರಣ ದಾಖಲಿಸಿ ಬಂಧನಕ್ಕೆ ಶೋಧ ನಡೆಸುತ್ತಿದ್ದಾಗ ತಲೆಮರೆಸಿಕೊಂಡಿದ್ದಗುಬ್ಬಚ್ಚಿ ಸೀನ ಮುಂಜಾನೆ ಈತ ಸರ್ಜಾಪುರದ ದೊಮ್ಮಸಂದ್ರದ ಬಳಿಯಿರುವ ಬೇಕರಿಯಿಂದ ತೆರಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಮೇಲೆ ದಾಳಿ ನಡೆಸಿದ್ದಾರೆ.