ಹೊಸದಿಲ್ಲಿ: ಫಿಫಾ ನೂತನ ರ್ಯಾಂಕಿಂಗ್ ಗುರುವಾರ ಪ್ರಕಟಗೊಂಡಿದ್ದು, ಭಾರತ 124ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ, ಈ ಬಾರಿಯ ಕೊಪಾ ಅಮೆರಿಕ ಚಾಂಪಿಯನ್ ಆರ್ಜೆಂಟೀನ ತಂಡ ಅಗ್ರ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆನಿಂತಿದೆ.
ಕಳೆದ ಜೂನ್ನಲ್ಲಿ ಪ್ರಕಟವಾಗಿದ್ದ ಫಿಫಾ ರ್ಯಾಂಕಿಂಗ್ನಲ್ಲಿ ಭಾರತ 3 ಸ್ಥಾನ ಕುಸಿತ ಕಂಡಿತ್ತು. 2026ರ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ 3 ಸ್ಥಾನ ಕೆಳಗಿಳಿದಿತ್ತು. ಅದಾಗಿ, ಅಲ್ಲೇ ಭಾರತ ಉಳಿದುಕೊಂಡಿದೆ.
ಆರ್ಜೆಂಟೀನ ಬಳಿಕ ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್, ಬ್ರಝಿಲ್, ಬೆಲ್ಜಿಯಂ, ನೆದರ್ಲೆಂಡ್ಸ್, ಪೋರ್ಚುಗಲ್, ಕೊಲಂಬಿಯ ಮತ್ತು ಇಟಲಿ ತಂಡಗಳು ಕ್ರಮವಾಗಿ 10ರೊಳಗಿನ ಸ್ಥಾನ ಪಡೆದುಕೊಂಡಿವೆ.