ಬೆಂಗಳೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಓಬಳಾಪುರ ಗ್ರಾಮದ ಪತ್ರಕರ್ತ ಹಾಗೂ ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು, ಗೋ ವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ರ. ನರಸಿಂಹಮೂರ್ತಿ ರವರ ಜೀವಮಾನದ ಸಾಧನೆಗಾಗಿ ಇವರನ್ನು ಸೇರಿ ದೇಶದ 38 ಜನರನ್ನು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು: ರಾಕೇಶ್ ಶರ್ಮಾ (ಮಧ್ಯಪ್ರದೇಶ), ಮುಕೇಶ್ ಠಾಕೂರ್ (ಜಾರ್ಖಂಡ್) ಪ್ರೊ . ತಮಿಳ್ ಸೆಲ್ವಿ (ತಮಿಳುನಾಡು), ಸಾದರ ನರೇಶ್ ಕುಮಾರ್ (ಮಹಾರಾಷ್ಟ್ರ), ಪ್ರಮೋದ ಕುಲಕರ್ಣಿ (ಕೊಪ್ಪಳ), ಡಾ. ಸೋಮಶೇಖರ ಡಿ. (ಕಲಬುರಗಿ), ಡಾ.ರಾಜು ಗುಂಡಾಪುರ (ರಾಮನಗರ), ಡಾ. ಶುಭ ನಂದೀಶ (ಕೋಲಾರ), ಪ್ರೊ. ಅಂಬಿಕಾ ಎ.ಆರ್. (ಬೆಂಗಳೂರು ಗ್ರಾ.), ಪ್ರೊ ಮನೋಜ ಎಂ.(ಮಂಡ್ಯ), ಡಾ.ಕೆ.ಸಿ.ನಾಗರಜ್ಜಿ (ಹಾವೇರಿ) ಮತ್ತು ರಾಷ್ಟ್ರೀಯ ಜಾನಪದ ಶ್ರೀ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಕಡಬಗೆರೆ ಮುನಿರಾಜು ಮತ್ತು ತುಮಕೂರು ಜಿಲ್ಲೆಯ ಬಿ. ಸಿ. ಗಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಪ್ರಶಸ್ತಿ: ಮೈಸೂರಿನ ಪ್ರೊ|ಎಚ್.ಆರ್.ವೆಂಕಟೇಶ, ರಾಯಚೂರಿನ ತಾಯಪ್ಪ ಬಾಗಲಕೋಟೆಯ ರಾಜ ಅಹ್ಮದ ನಬೀವಾಲೆ, ದಾವಣಗೆರೆಯ ಜಿ.ಎಸ್.ಷಡಾಕ್ಷರಪ್ಪ, ಕೊಡಗಿನ ಕೆ.ಎಸ್.ಮೂರ್ತಿ, ಬೆಳಗಾವಿಯ ನಾಗೇಂದ್ರ ಚೌಗಲೆ, ಚಿಕ್ಕಮಗಳೂರಿನ ಓಣಿತೋಟ ರತ್ನಾಕರ್, ಧಾರವಾಡದ ಈರಪ್ಪ ಎಮ್ಮಿ, ಉಡುಪಿಯ ಡಾ|ಗಣೇಶ ಗಂಗೊಳ್ಳಿ, ಬೀದರನ ರಾಘವೇಂದ್ರ ಡಿ.ಎಸ್., ತುಮಕೂರಿನ ನರಸಿಂಹಮೂರ್ತಿ. ರ, ಗದಗಿನ ವಸಂತ ಮದ್ದೂರ, ಶಿವಮೊಗ್ಗದ ಡಾ|ರಾಜುನಾಯ್ಕ ಎಸ್., ವಿಜಯನಗರದ ಸ್ಯಾಮಸನ್ ಪೆಂಡೆಮ್, ಹಾಸನದ ಆರ್ .ಜಿ.ಗಿರೀಶ್, ಚಿತ್ರದುರ್ಗದ ಬಿ.ಮೈಲಾರಪ್ಪ, ಚಿಕ್ಕಬಳ್ಳಾಪುರದ ಡಾ|ಸೋ.ಸು.ನಾಗೇಂದ್ರನಾಥ, ಚಾಮರಾಜನಗರದ ವಿ.ರಾಮದಾಸ, ಯಾದಗಿರಿಯ ಬಸವಯ್ಯ ಸ್ವಾಮಿ, ಬಳ್ಳಾರಿಯ ಜಗದೀಶ ಪೂಜಾರ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಸಾಂಘಿಕ ಪ್ರಶಸ್ತಿಗೆ ದಕ್ಷಿಣ ಕನ್ನಡದ ಪ್ರೇರಣಾ, ಚಿಕ್ಕಮಗಳೂರಿನ ಚಂಡಿಕೇಶ್ವರಿ ಅಂಟಿಗೆ ಪಿಂಟಿಗೆ ತಂಡ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಹಸಿರು ತೋರಣ ಗೆಳೆಯರ ಬಳಗ ಆಯ್ಕೆಯಾಗಿದೆ.ಫೆಬ್ರುವರಿ 5 ರಂದು ಮುದ್ದೇಬಿಹಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.