ಬೆಂಗಳೂರು: ಒಂದೇ ದಿನ ಲೋಕಾಯುಕ್ತ ಪೊಲೀಸರು ಮೂರು ಜನ ಸರ್ಕಾರಿ ನೌಕರರನ್ನು ಲಂಚ ಪಡೆಯುವ ವೇಳೆ ಬಂಧಿಸಿರುತ್ತಾರೆ.ಮೈಸೂರು ಜಿಲ್ಲೆಯ ಬೆಟ್ಟ ಪುರ ಪೊಲೀಸ್ ಠಾಣೆಯ ಸಬ ಇನ್ಸ್ಪೆಕ್ಟರ್ ಶಿವಕುಮಾರ್ ರವರು 80000 ಲಂಚ ಪಡೆಯುವ ಸಮಯದಲ್ಲಿ ಸಿಕ್ಕಿ ಬಿದ್ದಿರುತ್ತಾರೆ.
ಮುಖದ್ದಮಗೆ ಸಂಬಂಧಪಟ್ಟ ಹಾಗೆ ಮೊಬೈಲ್ ಫೋನ್ ಬಿಡುಗಡೆ ಮಾಡಲು ಮತ್ತು ಚಾರ್ ಶೀಟ್ ನಿಂದ ಹೆಸರು ಬಿಡಲು ಹಣ ಡಿಮ್ಯಾಂಡ್ ಮಾಡಿದ್ದರು ಎಂದು ವೆಂಕಟಚಲಪತಿ ಅಡ್ವಕೇಟ್ ರವರು ದೂರನ್ನು ಲೋಕಾಯುಕ್ತರಿಗೆ ಸಲ್ಲಿಸಿದರು.ಹಾಸನ್ ಲೋಕಾಯುಕ್ತ ಪೊಲೀಸರು ಬಸವರಾಜ್ ಚೀಫ್ ಆಫೀಸರ್ ಆಲೂರ್ ಪಟ್ಟಣ ಪಂಚಾಯತಿ ರವರು ಐವತ್ತು ಸಾವಿರ ರೂಪಾಯಿ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿರುತ್ತಾರೆ.
ಬಸವರಾಜ್ ರವರು ನವೀದ್ ಎಂಬುವರಿಗೆ ಈ ಸ್ವತ್ತು ಲೈಸೆನ್ಸ್ ಕೊಡಲು 2 ಲಕ್ಷ ರೂಪಾಯಿ ಡಿಮಾಂಡ್ ಮಾಡಿದ್ದರು ಎಂದು ನವೀನ್ ರವರು ಬಸವರಾಜ್ ರವರ ಮೇಲೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ನಿನ್ನೆ ಲಂಚ 50,000 ರೂಪಾಯಿ ಬಸವರಾಜ್ ರವರು ಪಡೆಯುವ ಸಮಯದಲ್ಲಿ ಸಿಕ್ಕಿ ಬಿದ್ದಿರುತ್ತಾರೆ.
ಕಾರ್ವಾರ್ ಲೋಕಾಯುಕ್ತ ಪೊಲೀಸರು ಶಿವಾನಂದ ಅಸಿಸ್ಟೆಂಟ್ ಡೈರೆಕ್ಟರ್ ಟೌನ್ ಪ್ಲಾನಿಂಗ್ ಮೆಂಬರ್ ರವರನ್ನು 10,000 ಲಂಚ ಪಡೆಯುವ ಸಮಯದಲ್ಲಿ ಬಲೆಗೆ ಬೀಳಿಸಿರುತ್ತಾರೆ.
ಪ್ರಶಾಂತ್ ನಾಯಕ್ ಕನ್ಸಲ್ಟೆಂಟ್ ಇಂಜಿನಿಯರ್ ರವರು ಟೆಕ್ನಿಕಲ್ ಸ್ಕ್ರೂಟನಿ ಒಪೀನಿಯನ್ ನೀಡುವ ಬಗ್ಗೆ ಶಿವಾನಂದರವರಿಗೆ ಕೇಳಿದಾಗ ಅವರು ಹತ್ತು ಸಾವಿರ ರೂಪಾಯಿ ಲಂಚ ಡಿಮ್ಯಾಂಡ್ ಮಾಡಿದ್ದರು ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.ಈ ಮೂರು ಜನ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುತ್ತಿರುತ್ತಾರೆ.