ಪೀಣ್ಯದಾಸರಹಳ್ಳಿ: ಡಿಜಿಟಲ್ ಬಿಸಿನೆಸ್ ಮತ್ತು ಐಟಿ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಎನ್ಟಿಟಿ ಡೇಟಾ ಸಂಸ್ಥೆಯು ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದಲ್ಲಿ ಬೆಂಗಳೂರಿನ ಲಕ್ಷ್ಮೀಪುರದಲ್ಲಿ ಸರ್ಕಾರಿ ಶಾಲೆ ಉದ್ಘಾಟನೆಗೊಂಡಿದೆ.
ಜೀವನದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯೆ ಸಹಕಾರಿಯಾಗಿದ್ದು ಓದಿ ವಿದ್ಯಾವಂತರಾಗಿ ಓದಿದ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರುವ ಕೆಲಸ ಆಗಬೇಕು.ಎನ್ಟಿಟಿ ಡೇಟಾ ಸಂಸ್ಥೆ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದಲ್ಲಿ ಉನ್ನತ ಮಟ್ಟದ ಸುಸಜ್ಜಿತ ಕೊಠಡಿಗಳು, ಸಭಾಂಗಣ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸೌರಶಕ್ತಿ ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆ ಒಳಗೊಂಡಂತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಗಳ ಮಕ್ಕಳ ಕಲಿಕೆಯ ಸ್ಥಳವನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ ನಾವೆಲ್ಲರೂ ಅವರಿಗೆ ಅಭಾರಿಯಾಗಿರೋಣ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ಹೇಳಿದರು.
ಎನ್ಟಿಟಿ ಡೇಟಾ ಇಂಕ್ ನ ಮುಖ್ಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ ಶಿಕ್ಷಣವು ಅದಕಾಶಗಳ ಬಾಗಿಲು ತೆರೆಯುವ ಕೀಲಿ ಕೈ ಆಗಿದೆ. ಆಕ್ಷಯ ಫೌಂಡೇಶನ್ ಹಾಗೂ ಎನ್ಟಿಟಿ ಡೇಟಾ ನಡುವಿನ ಈ ಸಹಯೋಗವು ಪ್ರತಿಯೊಂದು ಮಗುವಿಗೂ ಪರಿಸ್ಥಿತಿಗಳನ್ನು ಮೀರಿ ಕನಸುಗಳನ್ನು ನನಸು ಮಾಡುವತ್ತ ಸಾಗುವ ಅವಕಾಶ, ಸಾಧ್ಯತೆ ಮತ್ತು ಭರವಸೆಯನ್ನು ನೀಡುವ ಕೆಲಸ ಮಾಡಲಿದೆ.
ಈ ಉಪಕ್ರಮದ ಮೂಲಕ ನಾವು ನಮ್ಮ ಸಮುದಾಯದಲ್ಲಿರುವ ಯುವಜನತೆಯ ಸಾಮರ್ಥ್ಯಗಳನ್ನು ಬೆಳೆಸುವ ಮತ್ತು ಪೋಷಿಸುವ ಬದ್ದತೆಯನ್ನು ತೋರಿಸಿಕೊಟ್ಟಿದ್ದೇವೆ ಎಂದು ಹೇಳಿದರು ಈ ಯೋಜನೆಯು 2023ರ ಹೊತ್ತಿಗೆ ಹಿಂದುಳಿದ ವರ್ಗದ ಕುಟುಂಬ 50ಲಕ್ಷ ಯುವಜನತೆ ಮತ್ತು ಮಕ್ಕಳಿಗೆ ಶೈಕ್ಷಣಕ ಅವಕಾಶ ಮತ್ತು ಡಿಜಿಟಲ್ ಜಗತ್ತಿನ ಲಭ್ಯತೆ ಒದಗಿಸುವ ಎನ್ಟಿಟ ಡೇಟಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಜೊತೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಪ್ರಸ್ತುತ ಈ ಹೊಸ ಶಾಲೆಯಲ್ಲಿ 241 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅದರಲ್ಲಿ 131 ಹುಡುಗರು ಮತ್ತು 110 ಹುಡುಗಿಯರು ಇದ್ದಾರೆ.
ಈ ಸಮಾರಂಭದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್, ಟೆಕ್ನಾಲಜಿ ಇನ್ನಾಸರ್ಕಾರಿ ಶಾಳೆಗಳ ಮಕ್ಕಳ ಕಲಿಕೆಯ ಸ್ಥಳವನ್ನು ಶ್ರೀಮಂತಗೊಳಿಸುವ ಮೂಲಕ ದೀರ್ಘ ಕಾಲದ ಸಾಮಾಜಿಕ ಪರಿಣಾಮ ಉಂಟು ಮಾಡುವ ನಮ್ಮ ಉದ್ದೇಶ ಸಾಧನೆಯಲ್ಲಿ ಈ ಉಪಕ್ರಮವು ಮಹತ್ವದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ನೆರವಾದ ಎನ್ಟಿಟಿ ಡೇಟಾ ಸಂಸ್ಥೆಯ ನೆರವಿಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸದ ಈ ಪ್ರಯತ್ನಗಳನ್ನು ಮುಂದುವರಿಸಲು ಉತ್ಸು ಕರಾಗಿದ್ದೇವೆ.
ಶ್ರೀಧರ್ ವೆಂಕಟ್, ಅಕ್ಷಯ ಪಾತ್ರ ಫೌಂಡೇಶನ್ನ ಸಿಇಓ ಸ್ಪೆಕ್ಟರ್ ಸರ್ವೀಸಸ್ ನ ಹಿರಿಯ ಉಪಾಧ್ಯಕ್ಷ ಆದಿತ್ಯ, ಆಫುಲ್ಪುರ್ಕರ್ ಮತ್ತು ಅಕ್ಷಯ ಪಾತ್ರ ಫೌಂಡೇಶನ್ನ ಸಿಇಓ ಶ್ರೀಧರ್ ವೆಂಕಟ್, ನೀರಜ್ ವಾಸ್ ಹಾಗೂ ಪ್ರತಿಷ್ಠಾನದ ಇತರ ಎಎಕ್ಸ್ ಓಗಳು ಬಿಇಓ ರಾಮಮೂರ್ತಿ, ಮುಖ್ಯೋಪಾಧ್ಯಾಯ ಕೃಷ್ಣ ಮೂರ್ತಿ, ಕ್ಷೇತ್ರದ ಅಧ್ಯಕ್ಷ ಸೋಮಶೇಖರ್, ಲಕ್ಷ್ಮಿಪುರದ ಬಿಜೆಪಿ ಮುಖಂಡ ಲಕ್ಷ್ಮಣ್, ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.