ಬೆಳಗಾವಿ: ಎಂಎಲ್ಸಿ ಸಿಟಿ ರವಿ ಅಶ್ಲೀಲ ಪದ ಬಳಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿ ನಡೆಸಿ ಗುರುವಾರ ಪರಿಷತ್ನಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. “ಬಿಆರ್ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಪರಿಷತ್ನಲ್ಲಿ ಧರಣಿ ಮಾಡಿ ಕುಳಿತುಕೊಂಡ್ವಿ.
ಸಭಾಪತಿಗಳು ಅಧಿವೇಶನವನ್ನು 10 ನಿಮಿಷ ಮುಂದೂಡಿದರು. ಈ ವೇಳೆ ಸಿಟಿ ರವಿಯವರು ರಾಹುಲ್ ಗಾಂಧಿ ಅವರಿಗೆ ಡ್ರಗ್ ಅಡಿಕ್ಟ್ ರಾಹುಲ್ ಗಾಂಧಿ ಅಂತ 3-4 ಬಾರಿ ಹೇಳಿದರು. ಅದಕ್ಕೆ ನಾನು, ಸಿಟಿ ರವಿ ಕೊಲೆಗಾರ ಅಂದೆ. ಇದಕ್ಕೆ ಪ್ರತಿಯಾಗಿ ಸಿಟಿ ರವಿಯವರು ಅಶ್ಲೀಲ ಪದ ಬಳಸಿದರು. ಸಿ.ಟಿ.ರವಿ ಒಮ್ಮೆಯಲ್ಲ, 10 ಬಾರಿ ಹೇಳಿ ತೇಜೋವಧೆ ಮಾಡಿದರು” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಆ ಕೆಟ್ಟ ಪದವನ್ನು ನನ್ನ ಬಾಯಿಯಿಂದ ಹೇಳುವುದಕ್ಕೆ ಕಷ್ಟ ಆಗುತ್ತಿದೆ. ಅಶ್ಲೀಲ ಪದವನ್ನು ಬಿಜೆಪಿಯವರೇ ಕೇಳಿಸಿಕೊಂಡಿದ್ದರು. ಅಶ್ಲೀಲ ಪದ ಕೇಳಿಸಿಕೊಂಡು ಕೆಲವರು ಕಿವಿಯಲ್ಲಿ ಸಾರಿ ಹೇಳಿದರು. ನಾನು ಇನ್ನೂ ಆಘಾತದಲ್ಲಿ ಇದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.