ಬೆಂಗಳೂರು: ತಿರುಪತಿ ತಿರುಮಲದಲ್ಲಿ ಲಡ್ಡುವಿಗೆಪ್ರಾಣಿಕೊಬ್ಬು ಬೆರೆಸಿದ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ದೇವಾಲಯ ಶುದ್ಧೀಕರಣ ಮಾಡಿದ ಮಾದರಿಯಲ್ಲೇ ಬೆಂಗಳೂರಿನಲ್ಲೂ ಸಹ ಇಂದುಮಲ್ಲೇಶ್ವರಂನಲ್ಲಿರುವ ತಿರುಪತಿ ತಿರುಮಲ ದೇವ ಸ್ಥಾನದ ಶುದ್ಧೀಕರಣ ಕಾರ್ಯ ನಡೆಸಲಾಯಿತು.
ದೇವಾಲಯದ ಶುದ್ದೀಕರಣದ ಹಿನ್ನೆಲೆಯಲ್ಲಿ ಇಂದು ಭಕ್ತರಿಗೆ ದರ್ಶನ ನಿಷೇಧಿಸಲಾಗಿತ್ತು. ಲಡ್ಡು ವಿವಾದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಇಲ್ಲಿನ ಟಿಟಿಡಿ ಸಿಬ್ಬಂದಿ, ಈ ಹಿಂದೆ ಕಡಿಮೆ ಲಡ್ಡು ಸೇಲ್ ಆಗತ್ತಿತ್ತು. ಇದೀಗ ಹೆಚ್ಚು ಲಡ್ಡನ್ನು ಭಕ್ತರು ತೆಗೆದುಕೊಂಡು ಹೋಗ್ತಿದ್ದಾರೆ. ಯಾರು ತಿರುಪತಿಯಲ್ಲಿ ಆದ ಘಟನೆ ಬಗ್ಗೆ ಕೇಳ್ತಿಲ್ಲ. ಲಡ್ಡು ತೆಗೆದುಕೊಂಡು ಹೋಗ್ತಿದ್ದಾರೆ. ಪ್ರತಿನಿತ್ಯ ಒಂದು ಸಾವಿರ ಲಡ್ಡು ಮಾರಾಟವಾಗ್ತಿದೆ ಎಂದು ಹೇಳಿದ್ದಾರೆ.