ಬೆಂಗಳೂರು: ಅಂತರಾಷ್ಟ್ರೀಯ ಲಯನ್ ಸಂಸ್ಥೆ ದೇಶ ಹಾಗೂ ಪ್ರಪಂಚದಾದ್ಯಂತ 210 ದೇಶಗಳಲ್ಲಿ ಕಾರ್ಯಲಯ ಹೊಂದಿದ್ದು ಅನೇಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಬಡ ಜನತೆಗೆ ಆಶಾಕಿರಣವಾಗಿದೆ ಎಂದು ಅಂತರಾಷ್ಟ್ರೀಯ ಮಾಜಿ ನಿರ್ದೇಶಕ ವಿ. ವಿಜಯಕುಮಾರ್ ರಾಜು ತಿಳಿಸಿದರು.
ಬೆಂಗಳೂರಿನ ನಿಮ್ಯಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ಸಂಜೆ ನಡೆದ ಲಯನ್ ಜಿಲ್ಲಾ 317 ಎಫ್ ನ 2024 – 25 ನೇ ಸಾಲಿನ ಕ್ಯಾಬಿನೆಟ್ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಜಿಲ್ಲೆಯ ಉಪರಾಜ್ಯ ಪಾಲರಾದ ಆಕಾಶ್ ಎ. ಸುವರ್ಣ, ರಾಜು ಚಂದ್ರಶೇಖರ್ ಹಾಗೂ ಕ್ಯಾಬಿನೆಟ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಲಯನ್ ಸಂಸ್ಥೆ ಬೃಹತ್ ಸಂಸ್ಥೆಯಾಗಿದ್ದು, ಉತ್ತಮ ಸೇವೆ ಮಾಡುತ್ತಿದೆ ಜಿಲ್ಲಾ 317 ಎಫ್ ರ ರಾಜ್ಯಪಾಲರಾದ ಸಿ.ಎಂ. ನಾರಾಯಣಸ್ವಾಮಿ ಹಾಗೂ ತಂಡದವರು ಉತ್ತಮ ಸೇವಾ ಕಾರ್ಯ ಮಾಡುತ್ತಿದ್ದು ಈ ದಿನ 40 ಲಕ್ಷಕ್ಕೂ ಹೆಚ್ಚಿನ ಸೇವಾ ಕಾರ್ಯ ನಡೆಸಿದ್ದಾರೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಾಜ್ಯಪಾಲರಾದ ಸಿ.ಎಂ. ನಾರಾಯಣಸ್ವಾಮಿ ಮಾತನಾಡಿ ನಮ್ಮ ಜಿಲ್ಲಾ ಲಯನ್ಸ್ ಸಂಸ್ಥೆ ಎಲ್ಲರ ಸಹಕಾರದೊಂದಿಗೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಈ ದಿನ 52 ಬಡ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂಗಳ ಚೆಕ್, ಉತ್ತಮ ಗುಣಮಟ್ಟದ 15 ಲ್ಯಾಪ್ಟಾಪ್, ನೂರು ಜನಕ್ಕೆ ಹಕ್ಕಿ ಮೂಟೆ, ರೈನ್ ಕೋಟ್ ವಿತರಣೆ, ಕೆ.ಸಿ. ಜನರಲ್ ಆಸ್ಪತ್ರೆಯ ರೋಗಿಗಳ ಅಟೆಂಡರ್ ಗಳಿಗೆ ಒಂದು ವರ್ಷ ಊಟದ ವ್ಯವಸ್ಥೆ, ಪರಿಸರ ಸಂರಕ್ಷಣೆ, ಬಾಲ್ಯ ವ್ಯವಸ್ಥೆ ಕ್ಯಾನ್ಸರ್ ತಡೆಗಟ್ಟಲು ಹಣದ ನೆರವು, ದೃಷ್ಟಿ ದೋಷ ನಿವಾರಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಇಂದು ನಡೆದ ಕಾರ್ಯಕ್ರಮದಲ್ಲಿ ನೆರವು ನೀಡಿರುವುದಾಗಿ ತಿಳಿಸಿದರು.
ಅತಿಥಿಗಳಾಗಿ ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ವಿ.ವಿ. ಕೃಷ್ಣಾರೆಡ್ಡಿ, ಕೆ.ವಂಶಿಧರ್ ಬಾಬು, ಎಂ.ಸಿ.ಸಿ. ಡಾಕ್ಟರ್:ಎಸ್. ಕೃಷ್ಣೇಗೌಡ, ಬಿ.ಎಸ್. ರಾಜಶೇಖರಯ್ಯ, ಜಿಲ್ಲೆಯ ಮಾಜಿ ರಾಜ್ಯಪಾಲರು ಇತರೆ ಜಿಲ್ಲಾ ಪದಾಧಿಕಾರಿಗಳು, ಲಯನ್ ಜಿಲ್ಲಾ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.ಹೋಸ್ಟ್ ಕಮಿಟಿ ಅಧ್ಯಕ್ಷ ಅಜಿತ್ ಬಾಬು, ಕಾರ್ಯದರ್ಶಿ ಎಮ್.ಆರ್ ಶ್ರೀನಿವಾಸ್, ಸಂಘಟನಾ ಸಮಿತಿಯ ಲಯನ್ ಸಿಂಹ ಶಾಸ್ತ್ರಿ, ಮಾಧ್ಯಮ ಸಂಪರ್ಕಾಧಿಕಾರಿ ಮಂಜುನಾಥ್ ಭಾಗವಹಿಸಿದ್ದರು.