ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಪುಂಡು ಕರಿಗಳು ಎದುರಾಳಿನ ಗುಂಪುಗಳಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಲಾಂಗ್ ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಸುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಬಂಧಿಸಿರುತ್ತಾರೆ.
ವೀಲಿಂಗ್ ಮಾಡುತ್ತಿದ್ದ ಆರೋಪಿಗಳಾದ ಮಹೇಶ್(19) ಮತ್ತು ಮಂಜು ಅಲಿಯಾಸ್ ಪುನೀತ್(19) ಈ ಯುವಕರುಗಳು ಎದುರಾಳಿಗಳಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ಬೆದರಿಕೆಯೊಡ್ಡುತ್ತಿದ್ದರು.ಇವರುಗಳನ್ನು ಬಂಧಿಸಿ ಶಸ್ತ್ರಾಸ್ರ ಕಾಯ್ದಇಡಿ ಮತ್ತು ವೀಲಿಂಗ್…ಕಾಯ್ದೆಯಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮತ್ತು ಎಂ ವಿ ಆಕ್ಟ್ 199 /ಎ(5) ರಲ್ಲಿ ವಾಹನ ಮಾಲೀಕರಿಗೆ 25,000 ದಂಡ ಮತ್ತು 25 ವರ್ಷಗಳು ವಾಹನ ಚಾಲನಾ ಪತ್ರ ನೀಡದಿರುವಂತೆ ಆರ್ ಟಿ ಓ ರವರಿಗೆ ಕೋರಲಾಗಿದೆ ಎಂದು ಮತ್ತು ಕಾನೂನಿನಲ್ಲಿಯೇ ಇರುವುದಾಗಿದೆ ಎಂದು ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿ ತಿಳಿಸಿರುತ್ತಾರೆ.