ಬೆಂಗಳೂರು: ಲೀಲಾದೇವಿ ಆರ್ ಪ್ರಸಾದ್ ಅವರ ತೊಂಬತ್ತೆರಡನೇ ಹುಟ್ಟುಹಬ್ಬದ ಅಭಿನಂದನಾ ಸಮಾರಂಭವನ್ನು17-10-24 ರಂದು ಬಸವ ಭವನದಲ್ಲಿ ನಡೆಯಿತು.ಪ್ಲೆಕ್ಸ್ ಬೋರ್ಡ್ನಲ್ಲಿದ್ದ ಸಾರ್ಥಕ ಬದುಕಿನ ಸುಂದರ ಪಯಣ ಎನ್ನುವ ಅಡಿ ಬರಹ ಎಲ್ಲರ ಮನಸ್ಸು ಮುಟ್ಟಿತು.ನಿಜಕ್ಕೂ ಇವರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲಾಮಹಿಳೆಯರಿಗೆ ಮಾದರಿಯಾಗಿ ಯಶಸ್ವಿ ಜೀವನನಡೆಸಿದ್ದಾರೆ.
ಮಾಜಿ ಸಚಿವೆಯಾದ ಇವರು ರಾಜಕೀಯದಲ್ಲಿ ಪ್ರಾಮಾಣಿಕತೆ ಮೆರೆದ ಅಪರೂಪದ ವ್ಯಕ್ತಿ.ಈ ಕಾರ್ಯಕ್ರಮ ಸಂಪೂರ್ಣ ದಿನ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.ಸಭಾ ಕಾರ್ಯಕ್ರಮ,ಸನ್ಮಾನ,ವಚನ ಗಾಯನ,ವಚನದ ನೃತ್ಯ ರೂಪಕ ವಿಚಾರ ಸಂಕಿರಣ,ಲೀಲಾದೇವಿ ಪ್ರಸಾದ್ ಅವರೊಡನೆ ಸಂವಾದ ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ರೂಪಿಸಲಾಗಿತ್ತು.
ಈ ಕಾರ್ಯಕ್ರಮದ ಆತ್ಮೀಯ ಸಂವಾದದಲ್ಲಿ ನಾನು ಭಾಗಿಯಾದ ಹೆಮ್ಮೆ ನನಗಿದೆ.ಅನೇಕ ಪ್ರಖ್ಯಾತ ಸಾಹಿತಿಗಳು,ರಾಜಕೀಯ ನಾಯಕರು,ಮಠಾದೀಶರು ಉಪಸ್ಥಿತರಿದ್ದು ಈಉನ್ನತಮಟ್ಟದ ಸಮಾರಂಭವನ್ನು ಶ್ರೀಮಂತಗೊಳಿಸಿದ್ದರು.ಈ ಯಶಸ್ಸಿನ ಗೌರವ ಸಮಾರಂಭದ ರುವಾರಿ ನಾಗರಾಜ ಮೂರ್ತಿಯವರಿಗೆ(ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ) ಸಲ್ಲಬೇಕು.
ಮಹಿಳಾ ಸಭಲೀಕರಣಕ್ಕಾಗಿ ದುಡಿದ ಪ್ರಮುಖ ರಾಜಕೀಯ ಮಹಿಳೆ ಎನ್ನುವ ಹಿರಿಮೆ ಲೀಲಾದೇವಿ ಪ್ರಸಾದ್ ಅವರಿಗಿದೆ
1 ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ಇದು ಮೊದಲ ಮಹಿಳಾ ವಿಶ್ವವಿದ್ಯಾನಿಲಯ.ಇದಕ್ಕೆ ಇವರ ಕೊಡುಗೆ ಗಣನೀಯ
2 ಒನಕೆ ಓಬವ್ವ ಕೋ ಆಪರೇಟಿವ್ ಬ್ಯಾಂಕ್ –ಮೊದಲ ಮಹಿಳಾ ಬ್ಯಾಂಕ್ ಸ್ಥಾಪಕಿ
3 ಶಿವಶರಣೆ ಅಕ್ಕಮಹಾದೇವಿ ಹುಟ್ಟಿದ ಊರು ಉಡುತಡಿಯಲ್ಲಿ ಅವಳ ದೆವಸ್ಥಾನ ನಿರ್ಮಿಸಿ ಅದನ್ನು ಯಾತ್ರಾಸ್ಥಳ ಮಾಡಿದ ಸಾಧಕಿ
4 ಅನೇಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿದ ಉದಾರಿ
5 ಮಹಿಳಾ ಮೀಸಲಾತಿಗೆ ದೊಡ್ಡ ಮಟ್ಟದ ಹೋರಾಟ ಮಾಡಿದ ಛಲಗಾತಿ
ಹೀಗೆ ಇವರ ಮಹಿಳಾ ಹೋರಾಟ ಮತ್ತು ಸಾಧನೆಯ ಪಟ್ಟಿ ಸುಧೀರ್ಘವಾಗಿದೆ.ಇಂತಹಾ ಮಹಾನ್ ಮಹಿಳಾ ಶಕ್ತಿ ನಮ್ಮೊಡನೆ ಇರುವುದು ನಮಗೆ ನಿಜಕ್ಕೂ ಹೆಮ್ಮೆದೇವರು ಇವರಿಗೆ ಆಯುರಾರೋಗ್ಯವಿತ್ತು ಹರಸಲಿ ಎಂದು ನಾವು ಹಾರೈಸೋಣ