ಚಂದಾಪುರ: ಲೇಖಕ ಬಿ.ಪ್ರಕಾಶ್. ಹೊರತಂದಿರುವ ನವೋದಯ ವಿದ್ಯಾಲಯ ಪರಿಕ್ಷೆಯವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಿಯಾ ಗಿದ್ದು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳುಸದ್ಬಳಕೆ ಮಾಡಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್ ಸೂಚಿಸಿದರು.
ಅವರು ಹೆಬ್ಬಗೋಡಿಯ ಸರ್ಕಾರಿ ಶಾಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಜ್ಯೋತಿಗಾಯನ ಸಭಾ ವತಿಯಿಂದ ಹಮ್ಮಿಕೊಂಡಿದ್ದ ನವೋದಯ ವಿದ್ಯಾಲಯ 2025 ರ ಪರಿಕ್ಷೆಯ ಪೂರ್ವ ಸಿದ್ದತಾ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.ಈ ಸಂಚಕೆಯ ಲೇಖಕರಾದ ಬಿ.ಪ್ರಕಾಶ್ ವಿರಚಿತ ಪುಸ್ತಕವನ್ನು ಜ್ಯೋತಿಗಾಯನ ಸಭಾದ ನಿರ್ದೇಶಕರಾದ ಬಿ.ಬಿ.ಗೊರನಾಳ್ ಅವರು ತಮ್ಮ ಸಂಸ್ಥೆಯ ಮೂಲಕ ಲೋಕಾರ್ಪಣೆ ಮಾಡುತ್ತಿದ್ದಾರೆ, ಬಿ.ಬಿ.ಗೊರನಾಳ್ ಅವರು ಕಳೆದ 25-30 ವರ್ಷಗಳಿಂದ ಸಮಾಜ ಸೇವೆ,ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಮಾಡಿಕೊಂಡುಬರುತ್ತಿದ್ದಾರೆ.
ಇದರ ಜೊತೆಯಲ್ಲಿ ಜ್ಯೋತಿಗಾಯನ ಸಭಾ ಸಂಸ್ಥೆಯನ್ನು ಸ್ಥಾಪಿಸಿ ಇಡೀ ರಾಜ್ಯದಲ್ಲಿ ಮಕ್ಕಳಲ್ಲಿ ಸಂಗೀತಿ ಹಾಗೂ ಗಾಯನವನ್ನು ಗುರುತಿಸಿ ಅವರ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇದರೊಂದಿಗೆ ಗ್ರಾಮೀಣ ಹಾಗೂ ಬಡವಿದ್ಯಾರ್ಥಿಗಳನ್ನು ನವೋದಯ ವಿದ್ಯಾಲಯ ಪರೀಕ್ಷೆಯ ತರಬೇತಿಯನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಇಂದು ಈ ನವೋದಯ ವಿದ್ಯಾಲಯ ಸಂಚಿಕೆಯನ್ನು ಆನೇಕಲ್ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ನಮ್ಮ ಶಿಕ್ಷಣ ಇಲಾಖೆಯ ಪರವಾಗಿ ಬಿ.ಬಿ.ಗೊರನಾಳ್ ಅವರನ್ನು ಅಭಿನಂದಿಸಲು ಹರ್ಷವಾಗುತ್ತದೆ ಎಂದರು.
ಆನೇಕಲ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಶಿವಣ್ಣ ಮಾತನಾಡುತ್ತ ಜ್ಯೋತಿಗಾಯನ ಸಭಾದ ನಿರ್ದೆಶಕರಾದ ಬಿ.ಬಿ.ಗೊರನಾಳ ಹಲವಾರು ವರ್ಷಗಳಿಂದ ,ಕಲೆ,ಸಾಹಿತ್ಯ,ಸಂಗೀತ ಹಾಗೂ ಶೈಕ್ಷಣಿಕವಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಆಧುನಿಕತೆಯ ಪ್ರಪಂಚದಲ್ಲಿ ತಮ್ಮ ಸ್ವಂತಹಣದಿಂದ ಮುದ್ರಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತ ಬಂದಿದ್ದಾರೆ ಇವರ ಸೇವೆಯು ಮಾದರಿ ಹಾಗೂ ಸಮಾಜಕ್ಕೆ ಆದರ್ಶವಾಗಿದೆ ಎಂದರು.
ಜ್ಯೋತಿಗಾಯನ ಸಭಾದ ನಿರ್ದೇಶಕ ಹಾಗೂ ಪುಸ್ತಕ ಸಂಪಾದಕರಾದ ಬಿ.ಬಿ.ಗೊರನಾಳ್ ಮಾತನಾಡುತ್ತ ನನಗೆ ಕಲೆ,ಸಾಹಿತ್ಯ,ಸಂಗೀತ,ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸಿಕೊಂಡು ನನ್ನ ನಿಸ್ವಾರ್ಥ ಸೇವೆಯನ್ನು ಸಮರ್ಪಣೆ ಮಾಡುವುದರಲ್ಲಿ ನನಗೆ ಹೆಮ್ಮೆ ಮತ್ತು ಸಂತೃಪ್ತಿ ಇದೆ ಇದಕಿಂತ ನನಗೆ ಏನೂ ಬೇಡ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ರಶ್ಮಿ, ಶಿಕ್ಷಕಿ ಪವಿತ್ರ, ಸಿ.ಆರ್.ಪಿ ವಾಸುದೇವ, ಜ್ಯೋತಿಗಾಯನ ಸಭಾ ಸಂಸ್ಥೆಯ ನಿರ್ದೆಶಕರಾದ ಬಿ.ಬಿ.ಗೊರನಾಳ, ಜ್ಯೋತಿಗಾಯನ ಸಭಾ ಸಂಸ್ಥೆಯ ಮುಖ್ಯಶಿಕ್ಷಕರಾದ ಭಾವನ ಗೊರನಾಳ್,ಸಂಸ್ಥೆಯ ಆಡಳಿತಾಧಿಕಾರಿ ಲಲಿತಾ ಗೊರನಾಳ್, ಶಿಕ್ಷಣ ಸಂಯೋಜಕರಾದ ನಿಖಿಲ್ ಗೊರನಾಳ, ಕವಿ ಹಾಗೂ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಮಹೇಶ್ ಊಗಿನಹಳ್ಳಿ ಹಾಜರಿದ್ದರು.