ಬೆಂಗಳೂರು: ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಮತ್ತು ಸರ್ಕಾರಿಯೇತರ ಸಂಸ್ಥೆಗಳ ಸಹಯೋಗದಲ್ಲಿ ಲೈಂಗಿಕ ಕಳ್ಳ ಸಾಗಣೆಯಲ್ಲಿ ಸಿಲುಕಿದ್ದ 12 ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪ್ರಾಪ್ತ 12 ಹೆಣ್ಣು ಮಕ್ಕಳನ್ನು ರಕ್ಷಿಸಿ, 26 ಪಿಯುಗಳು ಮತ್ತು 5 ಜನ ಗಿರಾಕಿಗಳ ವಿರುದ್ಧ ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲು ಮಾಡಿಸಿಕೊಂಡಿರುತ್ತಾರೆ. ಹಾಗೂ ಇತರೆ ದೇಶದ ಪ್ರಜೆಯೆಂದು ದೃಢಪಟ್ಟಂತಹ ಪ್ರಕರಣಗಳಲ್ಲಿ ಎಫ್ ಆರ್ ಓ ಬೆಂಗಳೂರು ರವರ ಗಮನಕ್ಕೆ ತಂದು ಅವರುಗಳನ್ನು ಸಂಬಂಧಪಟ್ಟ ದೇಶಗಳಿಗೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.