ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಸ್ಥಾಪಿಸಿರುವ ಲೋಕಸ್ಪಂದನ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಪೊಲೀಸರಿಂದ ಸಿಗುವ ಪ್ರತ್ಯುತ್ತರ ಅಥವಾ ಧೈರ್ಯ ತುಂಬುವAತಹ ಮಾತುಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಅಭಿಪ್ರಾಯಗಳನ್ನು ಈ ಲೋಕ ಸ್ಪಂದನ ಶೀರ್ಷಿಕೆಯಲ್ಲಿ ದಾಖಲಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಗೌರವ ತಂದಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾಸಿಕ ಸರ್ವಿಸ್ ಕವಾಯಿತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ನಗರ ಎಲ್ಲಾ ಪೊಲೀಸ್ ಠಾಣೆ ಮತ್ತು ಅಧಿಕಾರಿ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಬಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದರು.
ಯಾವ ಯಾವ ಪೊಲೀಸರು ಯಾವ ಯಾವ ಠಾಣೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ ಅಂತಹವರ ಸರ್ವಿಸ್ ರೆಕಾರ್ಡ್ ಪುಸ್ತಕದಲ್ಲಿ ನಮೂದಿಸಬೇಕೆಂದು ಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದರು.
ನಿನ್ನೆ ಸಂಜೆ ಪೊಲೀಸ್ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ರವರು ಬೆಂಗಳೂರು ನಗರ ಪೊಲೀಸರ ಕಾರ್ಯವನು ತುಂಬು ಮನಸ್ಸಿನಿಂದ ಪ್ರಶಂಶಿಸಿದರು ಎಂದು ಆಯುಕ್ತರು ಕವಾಯಿತಿನಲ್ಲಿ ತಿಳಿಸಿದರು.
ಅಪರಾಧ ತಡೆ ಮತ್ತು ಪತ್ತೆ ಹಾಗೂ ಸಂಚಾರ ಸುವ್ಯವಸ್ಥೆ ಬಗ್ಗೆಯೂ ಸಹ ಡಿಜಿಪಿರವರು ಪ್ರಶಂಸಿಸಿದರು ಮತ್ತು ಡ್ರಗ್ಸ್ ಹಾವಳಿಯನ್ನು ಪತ್ತೆ ಮಾಡಿ ನಿಯಂತ್ರಣಕ್ಕೆ ತಂದಿರುವ ಬಗ್ಗೆಯೂ ಸಹ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯವರು ಪೊಲೀಸ್ರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ನಡೆಸಿ ಕನ್ನಡಕಗಳನ್ನು ಉಚಿತವಾಗಿ ನೀಡಲು ಬಂದಿರುತ್ತಾರೆ ಎಂದು ತಿಳಿಸಿದರು.
ಇದಲ್ಲದೆ ಅತಿ ಮುಖ್ಯವಾಗಿ ಆಯುಕ್ತರು ಎಸಿಪಿ ಮತ್ತು ಡಿಸಿಪಿ ಮಟ್ಟದ ಅಧಿಕಾರಿಗಳು ಪೊಲೀಸ್ ಠಾಣೆಯ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಸಹ ಆಲಿಸಿ ಪರಿಹಾರ ಕೊಡಬೇಕು, ಅವರಿಂದ ಆಗದಿದ್ದ ಪಕ್ಷದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಆದೇಶಿಸಿದರು. ಅತಿ ಮುಖ್ಯವಾಗಿ ಎಲ್ಲಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗಳು ಸಹ ಕೆಲಸ ನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.
ಕವಾಯತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಯುಕ್ತರು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಠಾಣಾಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ಸಹ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಡಿಸಿಪಿ ಮತ್ತು ಎಸಿಪಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಆಯುಕ್ತರ ಮಾಸಿಕ ಕವಾಯಿತು ಆಡುಗೋಡಿಯಲ್ಲಿರುವ ಸಿ ಎ ಆರ್ ದಕ್ಷಿಣ ವಿಭಾಗದ ಕವಾಯಿತು ಮೈದಾನದಲ್ಲಿ ಜರುಗಿತು.