ಲಂಡನ್: ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮೊದಲ ಬಾರಿಗೆ ಇಂಗ್ಲಿಷ್ ಕೌಂಟಿಯಲ್ಲಿ ಆಡಲಿದ್ದು, ಲ್ಯಾಂಕಾಶೈರ್ ಕೌಂಟಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ೫ ವಾರಗಳ ಒಡಂಬಡಿಕೆ ಆಗಿರುತ್ತದೆ.
ಏಕದಿನ ಕಪ್ ಮತ್ತು ೨ ಸುತ್ತುಗಳ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಅಯ್ಯರ್ ಈ ಕೌಂಟಿ ತಂಡವನ್ನು ಪ್ರತಿನಿಧಿಸಲಿದ್ದಾರೆ.ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಅವರನ್ನು ಅದೇ ತಂಡದಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಫಿಲ್ ಸಾಲ್ಟ್, ಲ್ಯಾಂಕಾಶೈರ್ ಕ್ಲಬ್ಗ ಶಿಫಾರಸು ಮಾಡಿದ್ದರು ಎನ್ನಲಾಗಿದೆ.
ಸೆ. ೫ರಿಂದ ದುಲೀಪ್ ಟ್ರೋಫಿ ಕ್ರಿಕೆಟ್ ಋತು ಆರಂಭಗೊಳ್ಳಲಿದ್ದು, ಇದಕ್ಕೆ ಮರಳುವ ಮುನ್ನ ಲ್ಯಾಂಕಾಶೈರ್ ಪರ ಕೆಲವು ಪಂದ್ಯಗಳನ್ನಾಡುವುದು ಅಯ್ಯರ್ ಯೋಜನೆಯಾಗಿದೆ.