ಬೆಂಗಳೂರು: ಜೆಪಿ ನಗರ ಪೊಲೀಸರು ಲ್ಯಾಪ್ಟಾಪ್ಗಳನ್ನು ಕಳವು ಮಾಡಿದ್ದ ಐದು ಜನ ಆರೋಪಿಗಳನ್ನು ಬಂಧಿಸಿ ಎರಡುವರೆ ಲಕ್ಷ ರೂ. ಬೆಲೆಬಾಳುವ 5 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳು ನವೆಂಬರ್ 13ರಂದು ಜೆಪಿ ನಗರ ಮೂರನೇ ಹಂತದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಸೆಂಟರ್ನ ಹಿಂಭಾಗದ ಚಿಲಕ ಮುರಿದು 5 ಲ್ಯಾಪ್ಟಾಪ್ಗಳನ್ನು ಕಳವು ಮಾಡಿದ್ದರು.
ಈ ಸಂಬಂಧ ಜೆಪಿ ನಗರ ಪೊಲೀಸ್ ರಿಗೆ ದೂರು ನೀಡಿದ್ದರು. ಜೆಪಿ ನಗರ ಪೊಲೀಸರು ಭರತ್(25), ವಿಶ್ವನಾಥ್(23), ಯಶ್ವಂತ್(23) ಸಂದೀಪ್ (21) ನಾಗೇಂದ್ರ ಪ್ರಸಾದ್(21) ರವರುಗಳನ್ನು ಬಂಧಿಸಿ ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಮೌಲ್ಯ ಎರಡುವರೆ ಲಕ್ಷ ರೂಗಳಾಗಿರುತ್ತದೆ. ಯಲಹಂಕ ಪೊಲೀಸರು ಸರ ಅಪಹರಣ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನಾಲ್ಕು ಲಕ್ಷ ರೂ ಬೆಲೆ ಬಾಳುವ 60 ಗ್ರಾಂ ತೂಕದ ಚಿನ್ನದ ಸರ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಆರೋಪಿಗಳು ವಾಯುಹಾರ ಮಾಡುತ್ತಿದ್ದ ಸಮಯದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರಗಳನ್ನು ಅಪಹರಿಸುತ್ತಿದ್ದರು ಎಂದು ತಿಳಿಸಿರುತ್ತಾರೆ. ಆರೋಪಿಗಳು ಯಲಹಂಕ ಕೆಆರ್ ಪುರ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರ ಅಪಹರಣ ಮಾಡಿದ್ದರು.ಈ ಸರಗಳನ್ನು ಇವರು ಮುತ್ತೂಟ್ ಫೈನಾನ್ಸ್ ಹಾಗೂ ದೊಡ್ಡಬಳ್ಳಾಪುರದ ಜ್ಯುವೆಲರಿ ಶಾಪ್ನಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿರುತ್ತಾರೆ.
ಮತ್ತೊಂದು ಪ್ರಕರಣದಲಿ ಮಹದೇವಪುರ ಪೊಲೀಸರು ದೇವಾ ಸಿಸ್ ದಾಸ್(35) ಮತ್ತು ಮಧುಸೂದನ್(20) ಐದು ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರ ಹಾಗೂ ಒಂದು ಮೋಟರ್ ಸೈಕಲ್ ವಶಪಡಿಸಿಕೊಂಡಿರುತ್ತಾರೆ.ಈ ಆರೋಪಿಗಳು ನವಂಬರ್ 21ರಂದು ಬಿಬಿಎಂಪಿ ಕಚೇರಿಯ ಮುಂಬಾಗವಿರುವ ಕೊಡಿಗೆಹಳ್ಳಿ ಅಪಾಟ್ರ್ಮೆಂಟ್ ಅಲ್ಲಿ ಕಳವು ಮಾಡಿದ್ದರು.
ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಆರುವರೆ ಲಕ್ಷ ಬೆಲೆಬಾಳುವ 21 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸ್ಟೇಷನ್, ಮಾಗಡಿ ರೋಡ್ ಪೊಲೀಸ್ ಸ್ಟೇಷನ್, ಮಾದನಾಯಕನಹಳ್ಳಿ ಪೊಲೀಸ್ ಸ್ಟೇಷನ್, ಪೀಣ್ಯ ಪೊಲೀಸ್ ಸ್ಟೇಷನ್, ರಾಜಗೋಪಾಲ್ ನಗರ ಪೊಲೀಸ್ ಸ್ಟೇಷನ್, ದಾಬಸ್ಪೇಟೆ ಪೊಲೀಸ್ ಸ್ಟೇಷನ್, ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಮತ್ತು ಗೋವಿಂದರಾಜ ನಗರ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ಮೋಟರ್ ಸೈಕಲ್ ಕಳವು ಮಾಡಿದ್ದರೂ ಎಂದು ತಿಳಿಸಿರುತ್ತಾರೆ.
ಪಿರ್ಯಾದುದಾರರು 22 ಸೆಪ್ಟೆಂಬರ್ ರಂದು ಗಣೇಶನ ಮೆರವಣಿಗೆ ನೋಡಲು ಮಹಾಲಿಯಾಲ್ ಮಹಾಲಕ್ಷ್ಮಿ ಲೇಔಟ್ 15ನೇ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಗಣೇಶನ ಮೆರವಣಿಗೆ ನೋಡಿ ಹಿಂತಿರುಗಿದ ಸಮಯದಲ್ಲಿ ಗಾಡಿ ಕಳವಾಗಿತ್ತು ಎಂದು ದೂರು ನೀಡಿದ್ದರು. ಮತ್ತು ಪಿರಿಯಾದುದಾರರು ಕುರುಬರಹಳ್ಳಿ ನಿವಾಸಿಯಾಗಿರುತ್ತಾರೆ.