ಬೆಂಗಳೂರು: ರೈತರ ಪಹಣೆಯಲ್ಲಿ ವಕ್ಫ್ ಹೆಸರು ಬರೆಯುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಯಲಹಂಕ ಸೇರಿದಂತೆ ವಿಜಯಪುರ, ಮಂಗಳೂರು, ಮತ್ತಿತರ ಕಡೆ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿ ಇಂದು ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ರೈತರ ಸಂಘಟನೆಯೊAದು ತಮ್ಮ ಭೂಮಿ ವಕ್ಫ್ ಪಾಲಾಗುವುದನ್ನು ತಪ್ಪಿಸುವಂತೆ ಮನವಿ ನೀಡಿದ್ದಾರೆ.