ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಕಳೆದ ಒಂದು ವರ್ಷದಲ್ಲಿ 176 ಕೊಲೆ ಪ್ರಕರಣ ದಾಖಲಾಗಿದೆ. 176 ಕೊಲೆಯಲ್ಲಿ 173 ಕೊಲೆಗಳು ಪತ್ತೆಯಾಗಿದ್ದು, ಇನ್ನು 3 ಕೊಲೆ ಕೇಸ್ ಪತ್ತೆಯಾಗದೇ ಉಳಿದಿದೆ.2023 ರಲ್ಲಿ 206 ಕೊಲೆ ನಡೆದಿತ್ತು. 206 ಕೊಲೆ ಕೇಸ್ ನಲ್ಲಿ 202 ಕೊಲೆ ಕೇಸ್ ಪತ್ತೆಯಾಗಿತ್ತು. ಇನ್ನು ನಾಲ್ಕು ಕೊಲೆ ಲೇಸ್ ಪತ್ತೆಯಾಗಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಕೊಲೆಗಳ ಸಂಖ್ಯೆ ಕಡಿಮೆಯಾಗಿದೆ.
2023 ರಲ್ಲಿ 537 ಕೊಲೆಯತ್ನ ಪ್ರಕರಣ ದಾಖಲಾಗಿದ್ದು, 2024 ರಲ್ಲಿ 450 ಪ್ರಕರಣಗಳು ದಾಖಲಾಗಿವೆ.ಬೆಂಗಳೂರಿನನಲ್ಲಿ ಸೈಬರ್ ಕ್ರೈಮ್ ಮೂರು ಪಟ್ಟು ಹೆಚ್ಚಳಗೊಂಡಿದ್ದು, 2024 ರಲ್ಲಿ ಬೆಂಗಳೂರಿನ17,495 ಜನರಿಗೆ ಸೈಬರ್ ವಂಚನೆಯಾಗಿದೆ. 18,00,57,17,886 ರೂ ವಂಚನೆ ( ಒಂದು ಸಾವಿರದ ಎಂಟು ನೂರು ಕೋಟಿ ಐವತ್ತೇಳು ಲಕ್ಷದ ಹದಿನೇಳು ಸಾವಿರದ ಎಂಟುನೂರ ಎಂಭತ್ತಾರು ರೂ ವಂಚನೆ ಆಗಿದೆ.)2023 ರಲ್ಲಿ 17,600 ಕೇಸ್ ದಾಖಲಾಗಿ ಆರು ನೂರು ಕೋಟಿ ಹಣ ವಂಚನೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಸೈಬರ್ ವಂಚನೆ ಹಣದ ಮೊತ್ತ ಹೆಚ್ಚಾಗಿದೆ.