ಬೆಂಗಳೂರು: ಲೋಕಾಯುಕ್ತ ಪೊಲೀಸರು ಹೊಸ ವರ್ಷದ ಜನವರಿ ನಾಲ್ಕರಿಂದ ಜನವರಿ 10 ರ ತನಕ ಕೇವಲ ಆರು ದಿನಗಳಲ್ಲಿ ಆರು ಜನ ಸರಕಾರಿ ನೌಕರರನ್ನು ಸಾರ್ವಜನಿಕರಿಂದ ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದಾರೆ. ಮತ್ತು ಇದಲ್ಲದೆ ಎಂಟು ಜನ ಸರ್ಕಾರಿ ನೌಕರ ಮತ್ತು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ 21 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿಯ ಕಾಗದಪತ್ರಗಳು, ಚಿನ್ನಾಭರಣಗಳು ಮತ್ತು ನಗದು ವಶಪಡಿಸಿಕೊಂಡಿರುತ್ತಾರೆ.
ಬೆಂಗಳೂರಿನ ಸಂಜಯನಗರ ಪೊಲೀಸರು ಅತಿಕ್ರಮವಾಗಿ ಆಟೋ ರಿಕ್ಷಾವನ್ನು ಮುಟ್ಟುಗೋಲು ಹಾಕಿಕೊಂಡು, ಪಿರಿಯಾದುದಾರರು ಆಟೋರಿಕ್ಷಾವನ್ನು ಬಿಡಿಸಿಕೊಳ್ಳಲು ಸಂಜಯ್ ನಗರ ಪೊಲೀಸ್ ಠಾಣೆಗೆ ಹೋದಾಗ 50,000 ರೂಪಾಯಿ ಲಂಚ ಡಿಮ್ಯಾಂಡ್ ಮಾಡಿದ್ದರು.ಈ ವಿಷಯವನ್ನು ಪಿರಿಯಾದುದಾರ ಮಹಮ್ಮದ್ ಸುಜಿತ್ ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ ಮೇರೆಗೆ ಎ ಎಸ್ ಐ ವಿಜಯ್ ಕುಮಾರ್ ಮತ್ತು ಆತನ ಸಹಚರನಾದ (ಸಾರ್ವಜನಿಕ) ಸೈಯದ್ ರಿಜ್ವಾನ್ ಮೂಲಕ 40,000 ಲಂಚ ಸ್ವೀಕರಿಸುವಾಗ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ.
ಹುಬ್ಬಳ್ಳಿ ನ್ಯಾಯಾಲಯದ ಕೋರ್ಟ್ ಹಾಲ್ ನಂಬರ್ ಐದರಲ್ಲಿ ಸೂಪರ್ಇಂಟೆನ್ಟ್ ಆಗಿರುವ ಸುರೇಶ್ ಎಂಬಾತನು ಹುಬ್ಬಳ್ಳಿ ನ್ಯಾಯಾಲಯದಲ್ಲಿ ಆದೇಶವಾಗಿದ್ದ ನ್ಯಾಯದ ಪ್ರತಿಯನ್ನು ನೀಡಲು ಪಿರಿಯಾದುದಾರರಾದ ಬಸವರಾಜು ಎಂಬುವವರಿಂದ ಅರವತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರವರೆಗೆ ಬಿದ್ದಿರುತ್ತಾನೆ.
ಹಾಸನ ಲೋಕಾಯುಕ್ತ ಪೊಲೀಸರು ಹಾಸನ ನಗರಸಭೆ ಆಯುಕ್ತ ನರಸಿಂಹಮೂರ್ತಿ ಮತ್ತು ಹಾಸನ ನಗರಸಭೆ ಇಂಜಿನಿಯರ್ ವೆಂಕಟೇಶ್ ರವರುಗಳನ್ನು ದೂರುದಾರರಿಗೆ ಹಾಸನ ನಗರಸಭೆ ಟೆಂಡರ್ ಬಿಲ್ ನೀಡಲು ಸುನಿಲ್ ಕುಮಾರ್ ರವರ ಕಡೆಯಿಂದ ರೂ. 1,50,000 ಲಕ್ಷ ರೂಪಾಯಿ ಲಂಚ ಪಡೆಯುವ ಸಮಯದಲ್ಲಿ ಬಂಧಿಸಿರುತ್ತಾರೆ.
ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ದೂರುದಾರರಾದ ಮಾರುತಿಗೆ ಟ್ರಾನ್ಸ್ಫಾರ್ಮರ್ ನೀಡಲು ರಾಮಣ್ಣ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ರವರ ಕಡೆಯಿಂದ ವಿನಯಕುಮಾರ್ ಬೆಸ್ಕಾಇಂಜಿನಿಯರ್, (ವಸಂತಪುರ) ರವರು ಒಂದು ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಲೆಗೆ ಬಿದ್ದಿರುತ್ತಾರೆ.ಸರಕಾರಿ ಸೌಮ್ಯದ ರಹಧಾರಿ ಪತ್ರಗಳನು ನೀಡಲು ಲಂಚ ಕೇಳುತ್ತಿದ್ದ ದೂರುದಾರರಾದ ಅಬಾಸ್ ಖಾನ್ ರವರಿಂದ ವೆಂಕಟೇಶ ಎಫ್ ಡಿ ಸಿ (ಅಡಿಷನಲ್ ಸೆಕ್ರೆಟರಿ ಪರ್ಮಿಟ್ಸ್ ವಿಭಾಗ) ರವರು 35 ಸಾವಿರದ ನೂರು ರೂಪಾಯಿ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.